ಕರ್ನಾಟಕ

karnataka

ETV Bharat / bharat

IAF ಫೈಟರ್​ ಜೆಟ್​ ತುರ್ತು ಲ್ಯಾಂಡಿಂಗ್​: ವಿಶೇಷ ಹೆದ್ದಾರಿ ಉದ್ಘಾಟಿಸಿದ ಕೇಂದ್ರ ಸಚಿವರು - Rajnath's Emergency landing

ಭಾರತೀಯ ವಾಯುಸೇನೆಯ ಸೂಪರ್ ಹರ್ಕ್ಯುಲಸ್ C-130J ಫೈಟರ್ ಜೆಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸಿದ್ದರು.

Rajnath Singh
ಜೆಟ್​ ತುರ್ತು ಲ್ಯಾಂಡಿಂಗ್

By

Published : Sep 9, 2021, 2:32 PM IST

ನವದೆಹಲಿ:ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಭಾರತೀಯ ವಾಯುಪಡೆಗೆ ಸೇರಿದ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಮೂಲಕ ಹೆದ್ದಾರಿ ಉದ್ಘಾಟನೆ ಮಾಡಲಾಗಿದೆ.

ಸೂಪರ್ ಹರ್ಕ್ಯುಲಸ್ C-130J ವಿಮಾನವನ್ನು ಭಾರತೀಯ ವಾಯುಸೇನೆಯ ಅತ್ಯಂತ ಅಪಾಯಕಾರಿ ಫೈಟರ್ ಜೆಟ್ ಎಂದೇ ಕರೆಯಲಾಗುತ್ತದೆ. ಇನ್ನುಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸೇನೆಯ ಸೌಲಭ್ಯಕ್ಕೆ ಎಂದು ಭಾರತಮಾಲಾ ಯೋಜನೆಯ ಅಡಿ 765.52 ಕೋಟಿ ರೂ. ವೆಚ್ಚದಲ್ಲಿ ಗಗರಿಯಾ - ಭಕಾಸರ್ ಮತ್ತು ಸತ್ತ-ಗಾಂಧವ್ ವಿಭಾಗದ ದ್ವಿಪಥದ ಒಟ್ಟು 196.97 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಿದೆ. ಇನ್ನು ವಾಯುಪಡೆ ತುರ್ತು ಭೂ ಸ್ಪರ್ಶಕ್ಕಾಗಿ ಬಳಸಲಾಗಿರುವ ಮೊದಲ ರಾಷ್ಟ್ರೀಯ ಹೆದ್ದಾರಿ ಕೂಡಾ ಇದಾಗಿದೆ.

ಇಬ್ಬರು ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಆರ್​ಕೆಎಸ್​ ಬದೂರಿಯ ಈ ವಿಮಾನದಲ್ಲಿ ಪ್ರಯಾಣಿಸಿದ್ದು, ತುರ್ತು ಭೂ ಸ್ಪರ್ಶ ಮಾಡುವ ಮೂಲಕ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದಾರೆ.

ABOUT THE AUTHOR

...view details