ETV Bharat Karnataka

ಕರ್ನಾಟಕ

karnataka

ETV Bharat / bharat

ಜಿಐಎಸ್ ಆಧಾರಿತ ಸ್ವಯಂಚಾಲಿತ ನೀರು ಸರಬರಾಜು ಘಟಕ ಉದ್ಘಾಟಿಸಿದ ರಾಜನಾಥ್ ಸಿಂಗ್ - ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ

ಡಿಫೆನ್ಸ್ ಎಸ್ಟೇಟ್ ಡೇ 2021 ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಂಟೋನ್ಮೆಂಟ್ ಬೋರ್ಡ್‌ಗಳಿಗೆ ಜಿಐಎಸ್ ಆಧಾರಿತ ನೀರು ಸರಬರಾಜು ವ್ಯವಸ್ಥೆ ಘಟಕ ಉದ್ಘಾಟಿಸಿದರು.

Rajnath Singh launches GIS-Based automatic water supply system
ಜಿಐಎಸ್ ಆಧಾರಿತ ಸ್ವಯಂಚಾಲಿತ ನೀರು ಸರಬರಾಜು ಘಟಕ ಉದ್ಘಾಟಿಸಿದ ರಾಜನಾಥ್ ಸಿಂಗ್
author img

By

Published : Dec 20, 2021, 8:35 PM IST

ನವದೆಹಲಿ: ಕಂಟೋನ್ಮೆಂಟ್ ಬೋರ್ಡ್‌ಗಳ ನಿವಾಸಿಗಳಿಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಸ್ವಯಂಚಾಲಿತ ನೀರು ಸರಬರಾಜು ಘಟಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ಡಿಫೆನ್ಸ್ ಎಸ್ಟೇಟ್ಸ್ ಡೇ 2021 ಕಾರ್ಯಕ್ರಮದಲ್ಲಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಕಂಟೋನ್ಮೆಂಟ್ ಬೋರ್ಡ್‌ಗಳಿಗೆ ಜಿಐಎಸ್ ಆಧಾರಿತ ನೀರು ಸರಬರಾಜು ವ್ಯವಸ್ಥೆ ಘಟಕವನ್ನು ಭಾಸ್ಕರಾಚಾರ್ಯ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ಸ್ ಮತ್ತು ಜಿಯೋ ಇನ್‌ಫರ್ಮ್ಯಾಟಿಕ್ಸ್ (ಬಿಸಾಗ್) ಡಿಫೆನ್ಸ್ ಸೆಕ್ರೆಟರಿ ಮತ್ತು ಡಿಫೆನ್ಸ್ ಎಸ್ಟೇಟ್ಸ್ ಡೈರೆಕ್ಟರ್ ಜನರಲ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದೆ.

ಕಂಟೋನ್ಮೆಂಟ್ ನಾಗರಿಕರಿಗೆ ನೀರಿನ ಸಂಪರ್ಕ ಒದಗಿಸಲು ಸುಲಭ ಮತ್ತು ವೇಗದ ಅಪ್ಲಿಕೇಶನ್ ಆಗಿದೆ. ಇದು ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿದ್ದು, ನಾಗರಿಕರಿಗೆ ನೀರು ಸರಬರಾಜು ಸಂಪರ್ಕದ ಸ್ಥಳವನ್ನು ಗುರುತಿಸುವ ಸೌಲಭ್ಯ ಒದಗಿಸುತ್ತದೆ. ಸ್ವಯಂ ಚಾಲಿತವಾಗಿ ಹತ್ತಿರದ ನೀರಿನ ಪೈಪ್‌ಲೈನ್​ಗಳನ್ನು ನಿರ್ಧರಿಸುತ್ತದೆ. ಅರ್ಜಿದಾರರು ಪಾವತಿಸಬೇಕಾದ ಸ್ಥಳ ಮತ್ತು ಮೊತ್ತವನ್ನು ಆಧರಿಸಿ ದೂರವನ್ನು ನಿಗದಿಪಡಿಸುತ್ತದೆ. ಸಂಪರ್ಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.

ಸಾಂಪ್ರದಾಯಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ನಾಗರಿಕರು ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ಅದು ಕಾರ್ಯಗತವಾಗಲೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಆಫ್​​ಲೈನ್​ನಲ್ಲಿ ಹಣವನ್ನು ಪಾವತಿ ಮಾಡುಬೇಕಾಗುತ್ತದೆ. ಆದರೆ, ಸಂಪರ್ಕ ಕಲ್ಪಿಸುವ ಅವಧಿ ತಿಳಿದಿರುವುದಿಲ್ಲ. ಬಿಎಎಸ್​​​​ಎಜಿ (BISAG) ಜಿಐಎಸ್ ಘಟಕವನ್ನು ಯಶಸ್ವಿಯಾಗಿ ಅಳವಡಿಸಿದೆ. ಇ-ಛಾವಾನಿ ಪೋರ್ಟಲ್‌ನೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಒಗ್ಗೂಡಿಸಿದೆ.

ಇದನ್ನೂ ಓದಿ: ಕೋವ್ಯಾಕ್ಸಿನ್‌ ತೆರೆದ ಬಾಟಲಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿಯೂ 28 ದಿನಗಳವರೆಗೆ ಸ್ಥಿರ..!

For All Latest Updates

ABOUT THE AUTHOR

...view details