ಕರ್ನಾಟಕ

karnataka

ETV Bharat / bharat

ವೃದ್ಧರು-ಯುವಕರ ಕಬಡ್ಡಿ ಪಂದ್ಯ.. ಹುಡುಗರೇ ನಾಚುವಂತೆ ರೈಡ್​ ಮಾಡಿದ ಅಜ್ಜಂದಿರು!

ರಾಜಸ್ಥಾನ ಸರ್ಕಾರದ ವತಿಯಿಂದ ಗ್ರಾಮೀಣ ಒಲಿಂಪಿಕ್ಸ್​​ ನಡೆಸಲಾಗ್ತಿದ್ದು, ಇದರ ಅಂಗವಾಗಿ ಯುವಕರು-ವೃದ್ಧರ ನಡುವೆ ಕಬಡ್ಡಿ ಪಂದ್ಯ ನಡೆದಿದೆ.

Rajiv Gandhi Rural Olympic Games
Rajiv Gandhi Rural Olympic Games

By

Published : Aug 30, 2022, 3:47 PM IST

ಜೈಪುರ(ರಾಜಸ್ಥಾನ):ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ ಪಂದ್ಯ ಇಂದಿಗೂ ಸಿಕ್ಕಾಪಟ್ಟೆ ಫೇಮಸ್​​​​. ಬಿಡುವಿನ ಸಮಯದಲ್ಲಿ ಕಬಡ್ಡಿ ಆಡುವ ರೂಢಿ ಈಗಲೂ ಇದೆ. ಪ್ರೋ ಕಬಡ್ಡಿ ಲೀಗ್​​ ಆರಂಭಗೊಂಡ ನಂತರ ಅದರ ಕ್ರೇಜ್​ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರಾಜಸ್ಥಾನದಲ್ಲಿ ನಡೆದಿರುವ ಕಬಡ್ಡಿ ಪಂದ್ಯವೊಂದು ಭಾರೀ ಪ್ರಸಿದ್ಧಿ ಆಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಜಸ್ಥಾನದಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಸಲಾಗುತ್ತದೆ. ಅದರಲ್ಲಿ ಬರೋಬ್ಬರಿ 44 ಸಾವಿರ ಹಳ್ಳಿಗಳ ಜನರು ಭಾಗಿಯಾಗುತ್ತಾರೆ. ಬರೋಬ್ಬರಿ ಒಂದು ತಿಂಗಳ ಕಾಲ ನಡೆಯುವ ಈ 'ರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ಸ್'​​​​​ನಲ್ಲಿ ಹಿರಿಯರು, ಮಹಿಳೆಯರು, ಯುವಕರು ಸಹ ಪಾಲ್ಗೊಳ್ಳುತ್ತಾರೆ. ಈ ಕ್ರೀಡಾಕೂಟದಲ್ಲಿ ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ ನಡೀತು ವೃದ್ಧರು-ಯುವಕರ ಕಬಡ್ಡಿ ಪಂದ್ಯ

ಗಮನ ಸೆಳೆದ ಕಬಡ್ಡಿ:ಕ್ರೀಡಾಕೂಟದ ಅಂಗವಾಗಿ ಯುವಕರು ಮತ್ತು ಹಿರಿಯರ ನಡುವೆ ಕಬಡ್ಡಿ ಪಂದ್ಯವೊಂದು ನಡೆದಿದೆ. ಇದರ ವಿಡಿಯೋ ತುಣುಕವೊಂದನ್ನು ಅಧಿಕೃತವಾಗಿ ರಾಜಸ್ಥಾನ ಸರ್ಕಾರ ಹಂಚಿಕೊಂಡಿದೆ. ಇದರಲ್ಲಿ ವೃದ್ಧರ ತಂಡ ಎಲ್ಲರೂ ನಾಚುವ ರೀತಿಯಲ್ಲೇ ರೈಡ್​​​ ಮಾಡಿದೆ. ಎದುರಾಳಿ ಯುವಕರ ಕಬಡ್ಡಿ ತಂಡದ ಮೇಲೆ ನುಗ್ಗಿ ಹೋಗಿರುವ ತಾತಂದಿರ ತಂಡ ಇಳಿ ವಯಸ್ಸಿನಲ್ಲೂ ಅಮೋಘವಾಗಿ ಕಬಡ್ಡಿ ಆಡುವ ಮೂಲಕ ಕಮಾಲ್​ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದ ಜನರಲ್ಲಿ ಸಾಂಪ್ರದಾಯಿಕ ಆಟದ ಮೂಲಕ ಸಾಮರಸ್ಯ ಹೆಚ್ಚಿಸುವ ಉದ್ದೇಶದಿಂದ ಈ ಕ್ರೀಡಾಕೂಟ ನಡೆಸಲಾಗ್ತದೆ. 30 ಲಕ್ಷ ಜನರು ಈ ಕ್ರೀಡೆಗೋಸ್ಕರ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 9 ಲಕ್ಷ ಮಹಿಳೆಯರು ಇರುವುದು ವಿಶೇಷ ಎನಿಸಿದೆ.

ಇದನ್ನೂ ಓದಿ:ಮಹಾಶಿವರಾತ್ರಿ: ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

ಈ ಕ್ರೀಡಾಕೂಟದಲ್ಲಿ ವಾಲಿಬಾಲ್​, ಹಾಕಿ, ಟೆನ್ನಿಸ್​ ಬಾಲ್​ ಕ್ರಿಕೆಟ್​, ಖೋ ಖೋ, ಕಬಡ್ಡಿ ಸೇರಿ ವಿವಿಧ ಗ್ರಾಮೀಣ ಆಟಗಳನ್ನು ಆಡಿಸಲಾಗ್ತದೆ. ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿರುವ ಸಿಎಂ ಅಶೋಕ್​ ಗೆಹ್ಲೋಟ್​, ನಮ್ಮದು 135 ಕೋಟಿ ಜನರು ಇರುವ ಬಲಿಷ್ಠ ದೇಶ. ಕ್ರೀಡೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜನೆ ಮಾಡಲಾಗ್ತಿದೆ. ಜೊತೆಗೆ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಈ ಮೂಲಕ ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details