ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಆರು ಮಂದಿ ಅಪರಾಧಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರು ಮಂದಿ ಅಪರಾಧಿಗಳು ಜೈಲಿನಿಂದ ರಿಲೀಸ್ - ಸುಪ್ರೀಂಕೋರ್ಟ್ ಆದೇಶ
ನಿನ್ನೆ ಆರು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಜೈಲಿನಿಂದ ಬಿಡುಗಡೆಗೊಂಡ ನಳಿನಿ
ವೆಲ್ಲೂರು ಜೈಲಿನಿಂದ ನಳಿನಿ, ಸಂತನ್ ಮತ್ತು ಮುರುಗನ್ ಹಾಗೂ ತೂತುಕುಡಿ ಜೈಲಿನಿಂದ ರವಿಚಂದ್ರನ್, ಚೆನ್ನೈ ಪುಝಲ್ ಜೈಲಿನಿಂದ ಜಯಕುಮಾರ್ ಮತ್ತು ರಾಬರ್ಟ್ ಬಯಾಸ್ ಬಿಡುಗಡೆಗೊಂಡಿದ್ದಾರೆ. ನಿನ್ನೆ ಆರು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಇದನ್ನೂ ಓದಿ:ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಇಂದು 6 ಮಂದಿ ಅಪರಾಧಿಗಳು ಬಿಡುಗಡೆ ಸಾಧ್ಯತೆ