ಕರ್ನಾಟಕ

karnataka

ETV Bharat / bharat

ಸೂಪರ್​​ ಸ್ಟಾರ್​ ರಜನಿ ಆರೋಗ್ಯ ಸ್ಥಿತಿ ಈಗ ಹೇಗಿದೆ, ಮಾರ್ನಿಂಗ್ ಹೆಲ್ತ್​ ಬುಲೆಟಿನ್​ ಹೇಳುವುದೇನು? - ರಜನಿಕಾಂತ್‌ ಇತ್ತೀಚಿನ ಸುದ್ದಿ

ತೀವ್ರ ರಕ್ತದೊತ್ತಡದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವ ರಜನಿಕಾಂತ್ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಪ್ರಗತಿ ಕಂಡುಬರುತ್ತಿದೆ. ಆದರೂ ಅವರ ರಕ್ತದೊತ್ತಡವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರೆದಿದೆ ಎಂದು ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

Rajinikanth
ರಜನಿಕಾಂತ್

By

Published : Dec 26, 2020, 1:13 PM IST

ಹೈದರಾಬಾದ್:ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ರಜನಿಕಾಂತ್​ ಅವರು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ನಿನ್ನೆ ದಾಖಲಾಗಿದ್ದು, ಇಂದು ಬೆಳಗ್ಗೆ ಅವರ ಆರೋಗ್ಯ ಸಂಬಂಧಿತ ಹೆಲ್ತ್​ ಬುಲೆಟಿನ್ ಅನ್ನು ವೈದ್ಯರು ಬಿಡುಗಡೆ ಮಾಡಿದ್ದಾರೆ,

ತೀವ್ರ ರಕ್ತದೊತ್ತಡದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವ ರಜನಿಕಾಂತ್ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ ಪ್ರಗತಿ ಕಂಡುಬರುತ್ತಿದೆ. ಆದರೂ ಅವರ ರಕ್ತದೊತ್ತಡವು ಇನ್ನೂ ಮೇಲ್ಮಟ್ಟದಲ್ಲಿ ಮುಂದುವರೆದಿದೆ ಎಂದು ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರತಿರೋಧದ ನಡುವೆಯೂ ಮಧ್ಯಪ್ರದೇಶದಲ್ಲಿ 3 ಕೃಷಿ ಕಾಯ್ದೆಗಳ ಅನುಷ್ಠಾನ

70 ವರ್ಷದ ಸೂಪರ್ ಸ್ಟಾರ್​ ರಜನಿಕಾಂತ್ ಅವರು ಕಳೆದ 10 ದಿನಗಳಿಂದ 'ಅಣ್ಣಾಥೆ' ಚಿತ್ರವೊಂದರ ಶೂಟಿಂಗ್‌ಗಾಗಿ ಹೈದರಾಬಾದ್‌ನಲ್ಲಿ ಉಳಿದುಕೊಂಡಿದ್ದರು. ನಿನ್ನೆ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರಿಗೆ ಬೇರೆ ಯಾವುದೇ ಖಾಯಿಲೆಯ ಲಕ್ಷಣಗಳಿಲ್ಲ. ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿನ್ನೆ ಆಸ್ಪತ್ರೆಗೆ ದಾಖಲಾದ ರಜನಿಕಾಂತ್ ಅವರ ಆರೋಗ್ಯ ಉತ್ತಮವಾಗಿ ಪ್ರಗತಿಯಲ್ಲಿದೆ. ಅವರ ರಕ್ತದೊತ್ತಡ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. ಆದರೆ, ನಿನ್ನೆಗಿಂತ ನಿಯಂತ್ರಣದಲ್ಲಿದೆ. ಚಿಕಿತ್ಸೆಯಲ್ಲಿ ಇದುವರೆಗೂ ಆತಂಕಕಾರಿಯಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇನ್ನಷ್ಟು ತಪಾಸಣೆಗೆ ಒಳಪಡಿಸಲಾಗುವುದು. ಅದರ ವರದಿಗಳು ಇಂದು ಸಂಜೆಯ ವೇಳೆಗೆ ಲಭ್ಯವಾಗುತ್ತವೆ ಎಂದು ಹೈದರಾಬಾದ್​ನ ಅಪೊಲೊ ಆಸ್ಪತ್ರೆ ಬೆಳಗಿನ ಪ್ರಕಟಣೆಯಲ್ಲಿ ತಿಳಿಸಿದೆ.

ಅವರಿಗೆ ಸಂಪೂರ್ಣ ವಿಶ್ರಾಂತಿ ಬೇಕಿದೆ. ಹೀಗಾಗಿ, ಸಂದರ್ಶಕರನ್ನು ಭೇಟಿ ಮಾಡಲು ಅನುಮತಿಸಲಾಗುವುದಿಲ್ಲ. ಅವರ ಡಿಸ್ಚಾರ್ಜ್​ ಬಗ್ಗೆ ಸಂಜೆ ವೇಳೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ABOUT THE AUTHOR

...view details