ಕರ್ನಾಟಕ

karnataka

ETV Bharat / bharat

ನ.30ಕ್ಕೆ ರಾಜಕೀಯ ಪ್ರವೇಶದ ಬಗ್ಗೆ ನಿಲುವು ವ್ಯಕ್ತಪಡಿಸ್ತಾರೆ ಸೂಪರ್ ಸ್ಟಾರ್ ರಜಿನಿ - ರಾಜಕೀಯದ ಬಗ್ಗೆ ಸೂಪರ್ ಸ್ಟಾರ್​ ನಿರ್ಧಾರ

ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸೋಮವಾರ ತಮ್ಮ ನಿಲುವು ವ್ಯಕ್ತಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ..

Rajinikanth
ರಜಿನಿಕಾಂತ್​

By

Published : Nov 29, 2020, 8:08 PM IST

ಚೆನ್ನೈ (ತಮಿಳುನಾಡು) :ಸೂಪರ್​ಸ್ಟಾರ್ ರಜಿನಿಕಾಂತ್​ ರಾಜಕೀಯ ಪ್ರವೇಶ ಕುರಿತಂತೆ ಸೋಮವಾರ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ತಮ್ಮ ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ತಮ್ಮ ನಿರ್ಧಾರ ಬಹಿರಂಗಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ವರ್ಷದ ಅಕ್ಟೋಬರ್​ನಲ್ಲಿ ರಾಜಕೀಯ ಪ್ರವೇಶ ಸ್ವಲ್ಪ ತಡವಾಗಬಹುದು ಎಂದು ರಜಿನಿಕಾಂತ್​ ಸುಳಿವು ನೀಡಿದ್ದರು. ಅವರ ಆರೋಗ್ಯದ ಕುರಿತು ಒಂದು ಪತ್ರ ಹರಿದಾಡಿದ್ದು, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.

ಆ ಪತ್ರದಲ್ಲಿ ಕೊರೊನಾ ಕಾರಣದಿಂದ ರಜಿನಿಕಾಂತ್ ಅತಿಯಾದ ಪ್ರಯಾಣ ಮಾಡಬಾರದು. ಒಂದು ವೇಳೆ ಕೊರೊನಾ ಸೋಂಕಿಗೆ ಒಳಗಾದ್ರೆ ಕಿಡ್ನಿ ಸೋಂಕಿನಿಂದ ಮತ್ತಷ್ಟು ಅಪಾಯವಾಗುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಹೇಳಿತ್ತು.

ಹಿಂದಿನ ವಾರ ಕೇಂದ್ರ ಗೃಹ ಮಂತ್ರಿ ಅಮಿತ್​​ ಶಾ ಅವರು ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ ಎಐಎಡಿಎಂಕೆಯೊಂದಿಗೆ ಮೈತ್ರಿ ಮುಂದುವರೆಯಲಿದೆ ಎಂದು ಬಿಜೆಪಿ ಹಾಗೂ ಎಐಎಡಿಎಂಕೆ ಸ್ಪಷ್ಟನೆ ನೀಡಿದ್ದರು. ಇದು ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು.

ಇದು ರಜಿನಿಕಾಂತ್ ಅವರ ಹೊಸ ಪಕ್ಷಕ್ಕೂ ಕೂಡ ಕೆಲ ತಿರುವು ತಂದಿದೆ. ಹಾಗಾಗಿ ಸೋಮವಾರ ರಾಜಕೀಯ ಪ್ರವೇಶದ ಬಗ್ಗೆ ರಜಿನಿ ಸ್ಪಷ್ಟನೆ ನೀಡಲಿದ್ದಾರೆ.

ABOUT THE AUTHOR

...view details