ಚೆನೈ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ಫೈನಾನ್ಶಿಯರ್ ಜಿ.ಎನ್ ಅನ್ಬು ಚೆಝಿಯಾನ್ ಅವರ ಪುತ್ರಿ ಎ. ಸುಶ್ಮಿತಾ ಅವರ ವಿವಾಹಕ್ಕೆ ನಟರಾದ ರಜಿನಿಕಾಂತ್, ಕಮಲ್ ಹಾಸನ್ ಮತ್ತು ಪ್ರಭು ಸೇರಿದಂತೆ ಇತರೆ ನಟರು, ನಿರ್ಮಾಪಕರಾದ ಬೋನಿ ಕಪೂರ್ ಮತ್ತು ಕಲೈಪುಲಿ ಎಸ್.ಥಾನು ಕೂಡ ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ಸಿ. ರಾಜೇಂದ್ರನ್ ಅವರ ಪುತ್ರ ಆರ್. ಶರಣ್ ಅವರೊಂದಿಗೆ ಜಿ.ಎನ್ ಅನ್ಬು ಚೆಝಿಯಾನ್ ಅವರ ಪುತ್ರಿ ಎ. ಸುಶ್ಮಿತಾ ಅವರ ವಿವಾಹ ಚೆನ್ನೈನ ತಿರುವನ್ಮಿಯೂರಿನ ಶ್ರೀರಾಮಚಂದ್ರ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಇದನ್ನೂ ಓದಿ:ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?
ನಟರಾದ ವಿಕ್ರಮ್ ಪ್ರಭು, ವಿಜಯ್ ಆಂಟೋನಿ, ನಾಸರ್, ಮನೋಬಾಲಾ, ವೈಭವ್, ಸುಬ್ಬು ಪಂಚು, ಮಾಯಿಲ್‌ಸಾಮಿ ಮತ್ತು ನಿರ್ದೇಶಕರಾದ ವೆಂಕಟ್ ಪ್ರಭು, ಲಿಂಗುಸಾಮಿ, ಸುಸಿ ಗಣೇಶನ್ ಮತ್ತು ಎಲ್ರೆಡ್ ಕುಮಾರ್ ಮತ್ತು ಇತರ ಗಣ್ಯರು ಆಶೀರ್ವದಿಸಿದರು.
ನಟ ಕಮಲ್ ಹಾಸನ್, ಇತರರು ಭಾಗಿ ಸುಶ್ಮಿತಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಗೋಪುರಂ ಸಿನಿಮಾಸ್‌ನ ಪ್ರಾಪ್ರಿಟ್ರಿಕ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್. ಶರಣ್ ಅವರು ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಸನ್ ಐಎಎಸ್ ಅಕಾಡೆಮಿಯ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.