ಕರ್ನಾಟಕ

karnataka

ETV Bharat / bharat

ರಜನಿ ಮಕ್ಕಳ್ ಮಂಡ್ರಂ ಪಕ್ಷದ ಸದಸ್ಯರು ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಬಹುದು: ವಿ.ಎಂ. ಸುಧಾಕರ್ - ಸೂಪರ್ ಸ್ಟಾರ್ ರಜನಿಕಾಂತ್

ರಜನಿ ಮಕ್ಕಳ್ ಮಂಡ್ರಂ ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ, ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು. ಆದರೆ ಯಾವುದೇ ಪಕ್ಷಕ್ಕೆ ಸೇರಿದರೂ ಕೂಡ ನೀವು ರಜಿನಿ ಅಭಿಮಾನಿಗಳು ಎಂಬುದನ್ನು ಮರೆಯಬೇಡಿ ಎಂದು ಪಕ್ಷದ ನಿರ್ವಾಹಕ ವಿ.ಎಂ. ಸುಧಾಕರ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಜನಿ ಮಕ್ಕಳ್ ಮಂಡ್ರಂ
ರಜನಿ ಮಕ್ಕಳ್ ಮಂಡ್ರಂ

By

Published : Jan 18, 2021, 1:15 PM IST

ನವದೆಹಲಿ: ರಜನಿ ಮಕ್ಕಳ್ ಮಂಡ್ರಂ ಪಕ್ಷದ ಸದಸ್ಯರು ರಾಜೀನಾಮೆ ನೀಡಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು ಎಂದು ರಜನಿ ಮಕ್ಕಳ್ ಮಂಡ್ರಂ ಪಕ್ಷದ ನಿರ್ವಾಹಕ ವಿ.ಎಂ.ಸುಧಾಕರ್​ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ ವಿ.ಎಂ. ಸುಧಾಕರ್, ರಜನಿ ಮಕ್ಕಳ್ ಮಂಡ್ರಂ ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ, ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು. ಯಾವುದೇ ಪಕ್ಷಕ್ಕೆ ಸೇರಿದರೂ ಕೂಡ ನೀವು ರಜಿನಿ ಅಭಿಮಾನಿಗಳು ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಅವರ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲದ ಕಾರಣ ಹೆಚ್ಚು ಪ್ರಯಾಣ ಮಾಡುವುದು, ಒತ್ತಡ ತೆಗೆದುಕೊಳ್ಳುವಂತಹ ಕೆಲಸಗಳಿಗೆ ಕೈ ಹಾಕದಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ, ರಜನಿಕಾಂತ್ ರಾಜಕೀಯದಿಂದ ದೂರ ಸರಿಯಲಿದ್ದಾರೆ. ಈ ಹಿನ್ನೆಲೆ ರಜನಿ ಮಕ್ಕಳ್ ಮಂಡ್ರಂ ಪಕ್ಷದ ಸದಸ್ಯರು ಬೇರೆ ಪಕ್ಷಕ್ಕೆ ಸೇರಲು ಅವಕಾಶ ಮಾಡಿಕೊಡಲಾಗಿದೆ.

ABOUT THE AUTHOR

...view details