ಕರ್ನಾಟಕ

karnataka

ETV Bharat / bharat

ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದಾರೆ ರಾಜೀಬ್ ಬ್ಯಾನರ್ಜಿ - ಈಶಾನ್ಯ ರಾಜ್ಯದ ರಾಜಧಾನಿ ಅಗರ್ತಲಾ

2023ರಲ್ಲಿ ನಡೆಯಲಿರುವ ಮುಂದಿನ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮಾತ್ರವೇ ಹೊರತು ಎಡರಂಗ ಅಥವಾ ಕಾಂಗ್ರೆಸ್ ಅಲ್ಲ ಎಂಬ ಸಂದೇಶವನ್ನು ಬಿಜೆಪಿಗೆ ನೀಡಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವಿಶೇಕ್ ಬಂಡೋಪಾಧ್ಯಾಯ ಅವರು ಮುಂದಾಗಿದ್ದಾರೆ..

Rajib Banerjee back to Trinamool Congress
ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದಾರೆ ರಾಜೀಬ್ ಬ್ಯಾನರ್ಜಿ

By

Published : Oct 31, 2021, 3:10 PM IST

ಅಗರ್ತಲಾ: ಈಶಾನ್ಯ ರಾಜ್ಯದ ರಾಜಧಾನಿ ಅಗರ್ತಲಾದಲ್ಲಿ ಪಕ್ಷದ ಹಿರಿಯ ರಾಜಿಬ್ ಬ್ಯಾನರ್ಜಿ ಮತ್ತೆ ಈಗ ತಮ್ಮ ಮೂಲ ಪಕ್ಷಕ್ಕೆ ಮರಳಲಿದ್ದಾರೆ. ಸತತ ಎರಡನೇ ಬಾರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಹಿನ್ನೆಲೆ ಮಾಜಿ ಸಚಿವ ಬ್ಯಾನರ್ಜಿ ಅವರು ಈಗ ಮತ್ತೆ ತಮ್ಮ ಪಕ್ಷಕ್ಕೆ ಮರಳಲು ಮುಂದಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಿದ್ದರು.

2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರ ಚುನಾವಣಾ ಅದೃಷ್ಟವು ಅವರ ಕೈ ಹಿಡಿಯಲಿಲ್ಲ. ಅವರು ಬಿಜೆಪಿ ಅಭ್ಯರ್ಥಿಯಾಗಿ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಡೊಮ್ಜೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. 2016ರಲ್ಲಿ ತಮ್ಮ ಮೂಲ ಪಕ್ಷದಿಂದ ಭಾರೀ ಮತಗಳ ಅಂತರದಿಂದ ಗೆದ್ದಿದ್ದರು.

2023ರಲ್ಲಿ ನಡೆಯಲಿರುವ ಮುಂದಿನ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮಾತ್ರವೇ ಹೊರತು ಎಡರಂಗ ಅಥವಾ ಕಾಂಗ್ರೆಸ್ ಅಲ್ಲ ಎಂಬ ಸಂದೇಶವನ್ನು ಬಿಜೆಪಿಗೆ ನೀಡಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವಿಶೇಕ್ ಬಂಡೋಪಾಧ್ಯಾಯ ಅವರು ಮುಂದಾಗಿದ್ದಾರೆ.

2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ವಿಜಯದ ನಂತರ ಅವಿಶೇಕ್ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಬಂಗಾಳದ ಹೊರಗಿನ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ಜಾಲವನ್ನು ವಿಸ್ತರಿಸುವ ಮೂಲಕ ತೃಣಮೂಲ ಕಾಂಗ್ರೆಸ್ ಅನ್ನು ರಾಷ್ಟ್ರೀಯ ಪಕ್ಷವಾಗಿ ಸ್ಥಾಪಿಸುವ ಉದ್ದೇಶದಲ್ಲಿದ್ದರು.

ಅವರು ಪ್ರಾಥಮಿಕವಾಗಿ ಈಶಾನ್ಯ ಭಾರತದಲ್ಲಿ ತ್ರಿಪುರಾ ಮತ್ತು ಅಸ್ಸೋಂ, ಉತ್ತರ ಭಾರತದಲ್ಲಿ ಉತ್ತರಪ್ರದೇಶ ಮತ್ತು ಪಶ್ಚಿಮ ಭಾರತದ ಕರಾವಳಿ ರಾಜ್ಯವಾದ ಗೋವಾವನ್ನು ತಮ್ಮ ಗುರಿಯಾಗಿ ಆರಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಅವರು ಗೋವಾದಲ್ಲಿ ಪ್ರವಾಸ ಕೈಗೊಂಡಿದ್ದರು.

ABOUT THE AUTHOR

...view details