ರಾಜಗಢ (ಮಧ್ಯಪ್ರದೇಶ): ಆಸ್ಪತ್ರೆಗೆ ದಾಖಲಾದ ವೃದ್ಧನ ಹೊಟ್ಟೆಯೊಳಗೆ ಲೋಟವೊಂದು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದೆ. ಕಳೆದ 4 ತಿಂಗಳಿನಿಂದ ಈ ಲೋಟ ಹೊಟ್ಟೆಯೊಳಗೇ ಇದೆ ಎಂದು ಹೇಳಲಾಗುತ್ತಿದೆ.
ರಾಮದಾಸ್ ಎಂಬ ವೃದ್ಧ ಹೊಟ್ಟೆ ನೋವು ತಾಳಲಾಗದೇ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಎಕ್ಸ್ರೇ ಮಾಡಿದಾಗ ಲೋಟ ಸಿಲುಕಿರುವುದು ಪತ್ತೆಯಾಗಿದೆ. ಸದ್ಯ ವೃದ್ಧ ರಾಮದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ವೃದ್ಧನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಈ ಲೋಟ ಹೊಟ್ಟೆಯೊಳಗೆ ಸೇರಿದ್ದು ಹೇಗೆ?:ಕಳೆದ ನಾಲ್ಕು ತಿಂಗಳ ಹಿಂದೆ ಈ ವೃದ್ಧ ಯಾವುದೋ ಗಲಾಟೆಯಲ್ಲಿ ತೊಡಗಿಸಿದ್ದರು. ಈ ವೇಳೆ ಕೆಲವರು ಆತನನ್ನು ವಿವಸ್ತ್ರಗೊಳಿಸಿ ಥಳಿಸಿ, ಲೋಟದ ಮೇಲೆ ಕೂರಿಸಿದ್ದರು. ಇದರಿಂದ ಲೋಟವು ಗುಪ್ತಾಂಗದ ಮೂಲಕ ಹೊಟ್ಟೆಯೊಳಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.