ರಾಜಗಢ (ಮಧ್ಯಪ್ರದೇಶ): ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಮೂಲಕ ನೆಲಸಮ ಮಾಡಿದೆ. ರಾಜಗಢ ಜಿಲ್ಲೆಯ ಜಿರಾಪುರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ 21 ಆರೋಪಿಗಳ ಪೈಕಿ 8 ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಮಂಗಳವಾರ ರಾತ್ರಿ ವೇಳೆ ವಧುವಿನ ಕಡೆಯುವರು ವರನ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಡಿಜೆ ಹಾಕಲಾಗಿತ್ತು. ಆದರೆ, ಗ್ರಾಮದ ಧಾರ್ಮಿಕ ಕೇಂದ್ರವೊಂದರ ಬಳಿ ಬಂದಾಗ ಕೆಲವರು ಡಿಜೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅಲ್ಲಿನ ಧಾರ್ಮಿಕ ಕೇಂದ್ರ ದಾಟುವವರೆಗೆ ಡಿಜೆ ನಿಲ್ಲಿಸಿ, ಮುಂದೆ ಸಾಗಿದಾಗ ಮತ್ತೆ ಡಿಜೆ ಹಾಕಿಸಲಾಗಿತ್ತು. ಆದರೆ, ಮುಂದೆ ಮೆರವಣಿಗೆ ಬಂದ ಮೇಲೆ ಹಿಂದಿನಿಂದ ಕೆಲ ಕಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.