ಜೈಪುರ(ರಾಜಸ್ಥಾನ):ಮೂರು ತಿಂಗಳ ಕಾಲ ದೆಹಲಿಯಲ್ಲಿದ್ದು, ಇದೀಗ ತವರಿಗೆ ಮರಳಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಇದೀಗ ಮಾರ್ಚ್ 8ರಿಂದ ಧಾರ್ಮಿಕ ಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ.
ಮೂರು ತಿಂಗಳ ಬಳಿಕ ರಾಜಸ್ಥಾನಕ್ಕೆ ವಸುಂಧರಾ ರಾಜೇ.. ಮಾ. 8ರಿಂದ ಧಾರ್ಮಿಕ ಯಾತ್ರೆ! - ಗುಜರಾತ್ ಮಾಜಿ ಮುಖ್ಯಮಂತ್ರಿ ಮಸುಂಧರಾ ರಾಜೇ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಿಂದ ಗುಜರಾತ್ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಧಾರ್ಮಿಕ ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
Vasundhara Raje
ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಸುಂಧರಾ ರಾಜೇ ಹುಟ್ಟುಹಬ್ಬ ಇದ್ದು, ಅಂದಿನಿಂದಲೇ ಧಾರ್ಮಿಕ ಪ್ರಯಾಣ ಆರಂಭ ಮಾಡಲಿದ್ದಾರೆ. ಈ ಯಾತ್ರೆಗೂ ಮುಂಚಿತವಾಗಿ ವಿವಿಧ ದೇವಾಲಯಗಳಿಗೆ ರಾಜೇ ಭೇಟಿ ನೀಡಿದ್ದು, ಪ್ರಮುಖವಾಗಿ ನಗರದ ಗೋವಿಂದ್ ದೇವ್ ಹಾಗೂ ಹನುಮಾನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ರಾಜಸ್ಥಾನದ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಪುನಿಯಾ ಜತೆಗಿನ ಸಂಘರ್ಷದಿಂದಾಗಿ ರಾಜ್ಯ ರಾಜಕಾರಣದಿಂದಾಗಿ ಅವರು ದೂರ ಸರಿದಿದ್ದರು. ಇದರ ಜತೆಗೆ ಕಳೆದ ಕೆಲ ತಿಂಗಳಿಂದ ಬಿಜೆಪಿ ಕೋರ್ ಕಮಿಟಿ ಸಭೆಗೆ ಹಾಜರಾಗಿರಲಿಲ್ಲ.