ಕರ್ನಾಟಕ

karnataka

ETV Bharat / bharat

ಮತಾಂತರ ಕಾರ್ಯಕ್ರಮದಲ್ಲಿ ಭಾಗಿ ವಿವಾದ: ಕೇಜ್ರಿವಾಲ್​ ಸಂಪುಟಕ್ಕೆ ಸಚಿವ ರಾಜೇಂದ್ರ ಪಾಲ್‌ ರಾಜೀನಾಮೆ - ದೆಹಲಿ ಸಚಿವ ರಾಜೀನಾಮೆ

ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಾದಕ್ಕೆ ಸಿಲುಕಿದ್ದ ದೆಹಲಿ ಸಚಿವ ರಾಜೇಂದ್ರ ಪಾಲ್‌ ಗೌತಮ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

rajendra-pal-gautam-resigns-from-arvind-kejriwal-cabinet
ಮತಾಂತರ ಕಾರ್ಯಕ್ರಮದಲ್ಲಿ ಭಾಗಿ ವಿವಾದ: ಕೇಜ್ರಿವಾಲ್​ ಸಂಪುಟಕ್ಕೆ ಸಚಿವ ರಾಜೇಂದ್ರ ಪಾಲ್‌ ರಾಜೀನಾಮೆ

By

Published : Oct 9, 2022, 5:52 PM IST

ನವದೆಹಲಿ: ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರದ ಸಚಿವ ರಾಜೇಂದ್ರ ಪಾಲ್‌ ಗೌತಮ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಧಾರ್ಮಿಕ ಮತಾಂತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಜೇಂದ್ರ ಪಾಲ್‌ ಗೌತಮ್‌ ವಿವಾದಕ್ಕೆ ಸಿಲುಕಿದ್ದರು. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವರಾಗಿದ್ದ ರಾಜೇಂದ್ರ ಪಾಲ್‌ ಗೌತಮ್‌ ಪಾಲ್ಗೊಂಡಿದ್ದ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ನೂರಾರು ಮಂದಿ ಹಿಂದೂ ದೇವರುಗಳನ್ನು ಬಹಿಷ್ಕರಿಸುವ ಪ್ರಮಾಣವಚನ ಸ್ವೀಕರಿಸಿದ್ದರು. ಇದರ ವಿಡಿಯೋ ವೈರಲ್‌ ಆಗಿ ರಾಜಕೀಯ ವಿವಾದ ಭುಗಿಲೆದ್ದಿತ್ತು. ಅಲ್ಲದೇ, ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿತ್ತು. ಸಚಿವ ಸಂಪುಟದಿಂದ ರಾಜೇಂದ್ರ ಪಾಲ್‌ ಗೌತಮ್‌ ಅವರನ್ನು ವಜಾ ಮಾಡುವಂತೆ ಬಿಜೆಪಿ ಆಗ್ರಹಿಸಿತ್ತು.

ಹಿಂದೂಗಳ ಭಾವನೆಗಳಿಗೆ ಆಮ್​ ಆದ್ಮಿ ಪಕ್ಷ ಧಕ್ಕೆ ತಂದಿದೆ. ರಾಜೇಂದ್ರ ಪಾಲ್‌ ಗೌತಮ್‌ ಅವರ ಹೇಳಿಕೆಗಳು ಆಪ್​ಗೆ ಹಿಂದೂ ಸಮುದಾಯದ ಮೇಲಿನ ದ್ವೇಷವನ್ನು ಎತ್ತಿ ತೋರಿಸುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದರು. ಇತ್ತ, ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ರಾಜೇಂದ್ರ ಪಾಲ್‌ ಗೌತಮ್‌ ವಿರುದ್ಧ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆಕ್ಕೆ 27ಕ್ಕೇರಿಕೆ... ಮೃತರಲ್ಲಿ ಕರ್ನಾಟಕದ ಇಬ್ಬರ ಗುರುತು ಪತ್ತೆ

ABOUT THE AUTHOR

...view details