ಕರ್ನಾಟಕ

karnataka

ETV Bharat / bharat

ಮೊಬೈಲಲ್ಲಿ ಮಾತಾಡಲು ಮರ, ಗುಡ್ಡ ಹತ್ಬೇಕು! ರಾಜಸ್ಥಾನದ 68 ಹಳ್ಳಿಗಳಿಗಿಲ್ಲ ನೆಟ್​ವರ್ಕ್​ ಭಾಗ್ಯ - ದೇಶದಲ್ಲಿ ಡಿಜಿಟಲ್​​ ಕ್ರಾಂತಿ

ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಗ್ರಾಮಗಳಲ್ಲಿ ಮೊಬೈಲ್​ನಲ್ಲಿ ಮಾತನಾಡಬೇಕಾದರೆ ಮರವೇರಬೇಕು ಇಲ್ಲವೇ ಗುಡ್ಡ ಹತ್ತುವ ದುಸ್ಥಿತಿ ಇದೆ. ಇದರ ಮಧ್ಯೆ ಅಲ್ಲಿನ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಮೊಬೈಲ್​ ವಿತರಣೆಗೆ ಮುಂದಾಗಿದೆ ಎಂಬುದು ಹಾಸ್ಯಾಸ್ಪದ ಸಂಗತಿ.

network connection
ರಾಜಸ್ಥಾನದ 68 ಹಳ್ಳಿಗಳಿಗಿಲ್ಲ ನೆಟ್​ವರ್ಕ್​ ಭಾಗ್ಯ

By

Published : Nov 28, 2022, 5:37 PM IST

Updated : Nov 28, 2022, 7:52 PM IST

ಆಲ್ವಾರ್(ರಾಜಸ್ಥಾನ):ದೇಶದಲ್ಲಿ ಡಿಜಿಟಲ್​​ ಕ್ರಾಂತಿ ನಡೆಯುತ್ತಿದೆ. ಇತ್ತೀಚೆಗಷ್ಟೇ 5ನೇ ತಲೆಮಾರಿನ (5ಜಿ) ಅಂತರ್ಜಾಲ ಸೇವೆಯನ್ನು ಪರಿಚಯಿಸಲಾಗಿದೆ. ಇಂತಹ ಅತ್ಯಾಧುನಿಕ ಕಾಲದಲ್ಲೂ ರಾಜಸ್ಥಾನದ 68 ಹಳ್ಳಿಗಳು ಇನ್ನೂ ಸಾಮಾನ್ಯ ಮೊಬೈಲ್‌ ನೆಟ್​ವರ್ಕ್ ಸೇವೆಯನ್ನೂ ಪಡೆದಿಲ್ಲ ಎಂಬುದು ಸೋಜಿಗದ ಸಂಗತಿ. ಇಲ್ಲಿನ ಜನರು ಮೊಬೈಲ್​ನಲ್ಲಿ ಮಾತನಾಡಲು ಮರ, ಗುಡ್ಡ, ಎತ್ತರದ ಪ್ರದೇಶವನ್ನು ಅವಲಂಬಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ರಾಜಸ್ಥಾನದ 68 ಹಳ್ಳಿಗಳಿಗಿಲ್ಲ ನೆಟ್​ವರ್ಕ್​ ಭಾಗ್ಯ

ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನರು ತಮ್ಮ ಬಂಧುಗಳೊಂದಿಗೆ ಮಾತನಾಡಬೇಕಾದರೆ ಮೊಬೈಲ್ ಹಿಡಿದು ಸರಸರನೇ ಮರ ಹತ್ತುತ್ತಾರೆ. ಅದೃಷ್ಟ ಸರಿ ಇದ್ದು ನೆಟ್​ವರ್ಕ್​ ತಾಗಿದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇಲ್ಲೊಂದು ದೊಡ್ಡ ಸಮಸ್ಯೆಯೇ ಇದೇ. ಮೊಬೈಲ್​ನಲ್ಲಿ ಮಾತನಾಡುತ್ತಾ ಮೈಮರೆತು ಅಪ್ಪಿತಪ್ಪಿ ಕಾಲುಜಾರಿ ಬಿದ್ದಲ್ಲಿ ಶಿವನ ಪಾದ ಸೇರೋದು ಗ್ಯಾರಂಟಿ.

ಇಲ್ಲಿಲ್ಲ ಡಿಜಿಟಲ್ ಇಂಡಿಯಾ ಪ್ರಭಾವ:ನೆಟ್​ವರ್ಕ್​ ಇಲ್ಲದ ಗ್ರಾಮಗಳು ಅಲ್ವಾರ್ ಜಿಲ್ಲಾ ಕೇಂದ್ರದಿಂದ 15 ಕಿಮೀನಷ್ಟು ದೂರದಲ್ಲಿವೆ. ಅಖ್ಬರ್‌ಪುರ, ಕಲಿಖೋರ್ ಗ್ರಾಮದಲ್ಲಿ ಇಂದಿಗೂ ಮರವೇರಿ ಮೊಬೈಲ್​ನಲ್ಲಿ ಮಾತನಾಡಬೇಕಿದೆ. ಕೆಲವೊಮ್ಮೆ ಅದೂ ಸಾಧ್ಯವಾಗದೇ ಊರಿಂದ 2 ಕಿಮೀ ದೂರ ಕ್ರಮಿಸಿ ಮೊಬೈಲ್​ ಬಳಸಬೇಕು. ಇವೆರಡೇ ಗ್ರಾಮವಲ್ಲದೇ ಸುತ್ತಲಿನ 68 ಹಳ್ಳಿಗಳೂ ಈ ಶಾಪಕ್ಕೀಡಾಗಿವೆ.

ಆನ್​ಲೈನ್​ ಸೇವೆಯೇ ಜನರಿಗೆ ಮರೀಚಿಕೆ:ಇಲ್ಲಿನ ಜನರಿಗೆ ಆನ್​ಲೈನ್​ನಲ್ಲಿ ನಡೆಯುವ ಎಲ್ಲ ಸೇವೆಗಳು ಮರೀಚಿಕೆಯಾಗಿವೆ. ಪಡಿತರ ಪಡೆಯಲು, ಮಕ್ಕಳು ಅಂತರ್ಜಾಲದ ಸಹಾಯದಿಂದ ಮಾಹಿತಿ ಸೇರಿದಂತೆ ಯಾವೊಂದಕ್ಕೂ ಇಲ್ಲಿ ಅವಕಾಶವಿಲ್ಲ. ಸರ್ಕಾರಿ ಆರೋಗ್ಯ ಕೇಂದ್ರಗಳೂ ನೆಟ್​ವರ್ಕ್​ ಇಲ್ಲದೇ ಸೊರಗಿವೆ.

ಸರ್ಕಾರದ ಮೊಬೈಲ್​ ಭಾಗ್ಯಕ್ಕಿಲ್ಲ ಕಿಮ್ಮತ್ತು:ಮುಖ್ಯಮಂತ್ರಿಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದಂತೆ ಮಹಿಳೆಯರಿಗೆ ಸ್ಮಾರ್ಟ್​ಫೋನ್​ ನೀಡಲು ಹೊರಟಿದೆ. ಇದರ ಮೂಲಕ ಸರ್ಕಾರದ ಎಲ್ಲ ಯೋಜನೆಗಳು ಬೆರಳತುದಿಯಲ್ಲೇ ಸಿಗುತ್ತವೆ ಎಂಬುದು ಸರ್ಕಾರದ ಆಶಯ. ಆದರೆ, ನೆಟ್​ವರ್ಕೇ ಇಲ್ಲದ ಈ ಊರುಗಳಲ್ಲಿ ಮೊಬೈಲ್​ ಬಂದರೇನು ಫಲ ಎಂಬುದು ಜನರ ಪ್ರಶ್ನೆಯಾಗಿದೆ.

5G ಯುಗದಲ್ಲಿ 4G ಬಗ್ಗೆ ಚರ್ಚೆ:ಈ ಗಂಭೀರ ಸಮಸ್ಯೆಯ ಬಗ್ಗೆ ಸರ್ಕಾರದ ಒಡೆತನಲ್ಲಿರುವ ಬಿಎಸ್​ಎನ್​ಎಲ್​ ಅಧಿಕಾರಿಗಳನ್ನು ಪ್ರಶ್ನಿಸಿದಾಗ ನೀಡುವ ಉತ್ತರವೇ ಬಾಲಿಶವಾಗಿದೆ. ಸರ್ಕಾರ ಅಲ್ವಾರ್ ಜಿಲ್ಲೆಯ 68 ಗ್ರಾಮಗಳನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಅಲ್ಲಿ ನೆಟ್‌ವರ್ಕ್ ಸಂಪರ್ಕ ಕೊಡಿಸಲಾಗುವುದು. ಈಗಾಗಲೇ ಕೆಲಸವೂ ಆರಂಭವಾಗಿದೆ. ಒಂದೂವರೆ ಎರಡು ವರ್ಷಗಳ ನಂತರ ಜನರಿಗೆ 4ಜಿ ನೆಟ್​ವರ್ಕ್ ಸೌಲಭ್ಯ ಸಿಗಲಿದೆ ಎಂದು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿಶ್ವದ ಸಮಬಲವಾಗಿ ಬೆಳೆಯಬೇಕೆಂದು 5G ನೆಟ್‌ವರ್ಕ್‌ ಪರಿಚಯಿಸಿದ್ದಾರೆ. ಆದರೆ ರಾಜಸ್ಥಾನದ ಈ ಗ್ರಾಮಗಳು ಮಾತ್ರ 4 ಜಿ ಸೇವೆಯಲ್ಲೇ ಉಳಿಯಬೇಕಿದೆ.

ಇದನ್ನೂ ಓದಿ:ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ​ಗೆ ಕೇಂದ್ರದ ಪ್ರತಿಕ್ರಿಯೆ

Last Updated : Nov 28, 2022, 7:52 PM IST

ABOUT THE AUTHOR

...view details