ಜೈಪುರ(ರಾಜಸ್ಥಾನ):ಅನಾದಿ ಕಾಲದಿಂದಲೂ ಮನುಷ್ಯ-ಪ್ರಾಣಿಗಳ ನಡುವೆ ಪ್ರೀತಿ, ಅನ್ಯೋನ್ಯತೆ ಇದೆ. ಇದಕ್ಕೆ ಪೂರಕವೆಂಬಂತೆ ಮಹಿಳೆಯೋರ್ವಳು ಚಿರತೆಗೆ ರಾಖಿ ಕಟ್ಟುತ್ತಿರುವ ಅಪರೂಪದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದೆ. ಇದು ರಾಜಸ್ಥಾನದಲ್ಲಿ ನಡೆದಿರುವ ಘಟನೆಯಂತೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್ ಮಾಡಿದ್ದಾರೆ.
ಅನಾರೋಗ್ಯ ಸ್ಥಿತಿಯಲ್ಲಿ ಗ್ರಾಮದಲ್ಲಿ ಚಿರತೆಯೊಂದು ಕಂಡುಬಂದಿದೆ. ಇದಕ್ಕೆ ರಾಖಿ ಕಟ್ಟಿರುವ ಮಹಿಳೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪ್ರೀತಿ ಮತ್ತು ಸಹೋದರತ್ವದ ಸಂಕೇತವಾದ ರಾಖಿಯನ್ನು ಈ ಪ್ರಾಣಿಗೆ ಕಟ್ಟಿರುವುದಾಗಿ ಆಕೆ ಹೇಳಿದ್ದಾರೆ. ಗುಲಾಬಿ ಬಣ್ಣದ ಸೀರೆಯುಟ್ಟ ಮಹಿಳೆ ಚಿರತೆಗೆ ರಾಖಿ ಕಟ್ಟುತ್ತಿರುವುದನ್ನು ನೀವು ಈ ಫೋಟೋದಲ್ಲಿ ಕಾಣಬಹುದು.