ಕಿಶನ್‌ಗಢ(ರಾಜಸ್ಥಾನ): ವಿಶ್ವದೆಲ್ಲೆಡೆ ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ವರ್ಚುಯಲ್ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ್ದು, ಆರೋಗ್ಯಕ್ಕಾಗಿ ಯೋಗ ಮುಖ್ಯ ಎಂದು ತಿಳಿಸಿದ್ದಾರೆ.
ವಿಶ್ವ ಯೋಗ ದಿನಾಚರಣೆ ನಿಮಿತ್ತ ವಿವಿಧ ಯೋಗಪಟುಗಳು ತಮ್ಮ ಸಾಧನೆ ಹೊರಹಾಕುತ್ತಿದ್ದು, ಸದ್ಯ ರಾಜಸ್ಥಾನದ ಮಹಿಳೆಯೊಬ್ಬಳು 10 ನಿಮಿಷದಲ್ಲಿ ದಾಖಲೆಯ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಮೋನಿಕಾ ಎಂಬ ಮಹಿಳೆ 10 ನಿಮಿಷ 58 ಸೆಕೆಂಡ್ಗಳಲ್ಲಿ 108 ಸೂರ್ಯ ನಮಸ್ಕಾರ ಮಾಡಿದ್ದು, ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.
10 ನಿಮಿಷದಲ್ಲಿ 108 ಸಲ 'ಸೂರ್ಯ ನಮಸ್ಕಾರ' ಇದನ್ನೂ ಓದಿರಿ: Unlock 2.0: 16 ಜಿಲ್ಲೆಗಳ ಜೊತೆಗೆ ಮತ್ತೆ 6 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ
ಇದೇ ವಿಚಾರವಾಗಿ ಈಟಿವಿ ಭಾರತ ಜತೆ ಮಾತನಾಡಿರುವ ಮೋನಿಕಾ, ನನ್ನ ಕುಟುಂಬ ಕೊರೊನಾ ವೈರಸ್ ಸೋಂಕಿಗೊಳಗಾಗಿತ್ತು. ಈ ಸಂದರ್ಭದಲ್ಲೂ ಕೂಡ ನಾನು ವರ್ಚುಯಲ್ ಆಗಿ ವಿದ್ಯಾರ್ಥಿಗಳಿಗೆ ಯೋಗ ಕ್ಲಾಸ್ ಹೇಳಿದ್ದೇನೆ. ನನಗೂ ಕೊರೊನಾ ಸೋಂಕು ತಗುಲಿದ್ದ ವೇಳೆ ಹೆಚ್ಚಿನ ಸಮಯ ಯೋಗದಲ್ಲಿ ಕಳೆದಿದ್ದೇನೆ. ಅದೇ ನನಗೆ ವಿಶ್ವದಾಖಲೆ ಮಾಡಲು ಸಹಕಾರಿಯಾಗಿದೇ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದ ಯೋಗ ಮಾಡುತ್ತಿರುವ ಮೋನಿಕಾ, ಉಮೇಶ್ ವೀಮಾ ಹಾಗೂ ಹೇಮಲತಾ ಶರ್ಮಾ ಅವರ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. 2014ರಿಂದಲೂ ಪ್ರಪಂಚದಾದ್ಯಂತ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯವಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ನಾವು ಸದೃಢವಾಗಿರಲು ಯೋಗ ಅವಶ್ಯ ಎಂದು ಇದೇ ವೇಳೆ ತಿಳಿಸಿದ್ದಾರೆ.