ಕರ್ನಾಟಕ

karnataka

ETV Bharat / bharat

ತೆರಿಗೆ ವಂಚನೆ ಆರೋಪ: ಟ್ಯಾಕ್ಸಿ ಡ್ರೈವರ್‌ಗೆ 5 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್ ​ - ಟ್ಯಾಕ್ಸಿ ಡ್ರೈವರ್‌ಗೆ 5 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್ ​

ರಾಜಸ್ಥಾನದ ಬಾರ್ಮರ್‌ನ ಪನೋರಿಯಾ ಗ್ರಾಮದ ಟ್ಯಾಕ್ಸಿ ಡ್ರೈವರ್‌ವೊಬ್ಬರಿಗೆ ಆದಾಯ ತೆರಿಗೆ ಇಲಾಖೆಯು 5 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್​ ನೀಡಿದ್ದು, ಇದರಿಂದಾಗಿ ಟ್ಯಾಕ್ಸಿ ಚಾಲಕ ಕಂಗಾಲಾಗಿದ್ದಾನೆ.

Rajasthan taxi driver
Rajasthan taxi driver

By

Published : Mar 4, 2021, 7:27 AM IST

ಬಾರ್ಮರ್ (ರಾಜಸ್ಥಾನ): ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸಿ ಡ್ರೈವರ್‌ವೊಬ್ಬರಿಗೆ 5 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್​ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ನೋಟಿಸ್ ​ಕುರಿತು ಮಾಹಿತಿ ನೀಡಿದ ಟ್ಯಾಕ್ಸಿ ಡ್ರೈವರ್

ಬಾರ್ಮರ್‌ನ ಪನೋರಿಯಾ ಗ್ರಾಮದ ಗಜೇದನ್ ಚರಣ್ (35) ಅವರು 32.63 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ, 4.89 ಕೋಟಿ ರೂ. ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ.

ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿದ ಚರಣ್, ನನಗೆ ಗೊತ್ತಿಲ್ಲದೆಯೇ ಯಾರೋ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಸಿಕೊಂಡು ಸಂಸ್ಥೆಯೊಂದರಲ್ಲಿ ಹೆಸರು ನೋಂದಾಯಿ ವ್ಯವಹಾರ ನಡೆಸಿದ್ದಾರೆ. ಗ್ರಾಮದಲ್ಲಿ ಟ್ಯಾಕ್ಸಿ ಓಡಿಸುವ ಸಾಮಾನ್ಯ ವ್ಯಕ್ತಿ ನಾನು. ತಿಂಗಳಿಗೆ 10,000 ರೂ. ಸಂಪಾದಿಸುತ್ತೇನೆ. 5 ಕೋಟಿ ರೂ. ಆದಾಯ ತೆರಿಗೆಯನ್ನು ಹೇಗೆ ಪಾವತಿಸುವುದು?. 32.63 ಕೋಟಿ ರೂ. ವ್ಯಾಪಾರ ವಹಿವಾಟಿನ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ಹೇಳಿದರು.

ಇನ್ನು ಡಾಕ್ಯುಮೆಂಟ್ ವಂಚನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details