ಬಿಕಾನೇರ್ (ರಾಜಸ್ಥಾನ):ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಶಂಕಿತ ಪಾರಿವಾಳವನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾಜನ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜನ ಪ್ರದೇಶದ ಬಳಿ ಕುತ್ತಿಗೆ ಮತ್ತು ಒಂದು ಕಾಲಿಗೆ ಉಂಗುರಗಳನ್ನು ಜೋಡಿಸಿದ್ದ ಪಾರಿವಾಳವನ್ನು ಹಿಡಿಯಲಾಗಿದೆ.
ಪಾಕಿಸ್ತಾನಿ ಮೊಬೈಲ್ ಸಂಖ್ಯೆ, ರಿಂಗ್ ಹೊಂದಿದ್ದ ಶಂಕಿತ ಪಾರಿವಾಳ ಸೆರೆ
ಪಾಕಿಸ್ತಾನದ ಮೊಬೈಲ್ ಸಂಖ್ಯೆ ಇರುವ ಚೀಟಿಯನ್ನು ಲಗತ್ತಿಸಿದ್ದ ಹಾಗೂ ಉಂಗುರಗಳನ್ನು ಹೊಂದಿದ್ದ ಶಂಕಿತ ಪಾರಿವಾಳವನ್ನು ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಸೆರೆಹಿಡಿಯಲಾಗಿದೆ.
ಪೊಲೀಸರ ಪ್ರಕಾರ, ಹಕ್ಕಿಯ ಮೈ ಮೇಲೆ ಒಂದು ಚೀಟಿಯನ್ನು ಲಗತ್ತಿಸಿದ್ದು, ಅದರಲ್ಲಿ ಪಾಕಿಸ್ತಾನದ ಮೊಬೈಲ್ ಸಂಖ್ಯೆ ಇದೆ. ಅನುಮಾನಗೊಂಡ ಪಾರಿವಾಳವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲುಂಕರನ್ಸರ್ ಮತ್ತು ಮಹಾಜನ್ ಪೊಲೀಸ್ ತಂಡಗಳು ಈ ಹಕ್ಕಿಯನ್ನು ಸೆರೆಹಿಡಿದಿದ್ದು, ಮಹಾಜನ್ ಫೈರಿಂಗ್ ರೇಂಜ್ನಲ್ಲಿ ಭದ್ರತಾ ಪಡೆಗಳು ಸಕ್ರಿಯವಾಗಿರುವುದರಿಂದ ಎಚ್ಚರಿಕೆ ನೀಡಲಾಗಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾರಿವಾಳಗಳು ಮತ್ತು ಪಾಕಿಸ್ತಾನದ ಸಂದೇಶಗಳಿರುವ ಬಲೂನುಗಳು ಕಂಡುಬಂದಿರುವ ಇಂತಹ ಅನೇಕ ಘಟನೆಗಳನ್ನು ಭದ್ರತಾ ಸಂಸ್ಥೆಗಳು ಈ ಹಿಂದೆಯೂ ವರದಿ ಮಾಡಿದ್ದವು.