ಜೈಪುರ: 20 ಅಡಿ ಆಳದಷ್ಟು ಬಾಯ್ತೆರೆದ ರಸ್ತೆಯ ಗುಂಡಿಯೊಳಗೆ ಚಲಿಸುತ್ತಿದ್ದ ಆಟೋವೊಂದು ಬಿದ್ದಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದ ಅಶೋಕ ನಗರದಲ್ಲಿ ನೀರಿನ ಪೈಪ್ಲೈನ್ ಒಡೆದು ರಸ್ತೆ ಬಾಯ್ಬಿಟ್ಟಿದ್ದು, 20 ಅಡಿಯಷ್ಟು ಆಳದ ಗುಂಡಿ ಬಿದ್ದಿದೆ. ಈ ಗುಂಡಿಯಲ್ಲಿ ಬಿದ್ದ ಆಟೋ ಚಾಲಕ ಹಾಗೂ ಪ್ರಯಾಣಿಕನನ್ನು ತುರ್ತು ಸೇವಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ. ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಡ್ರೈವರ್ ಸ್ಥಿತಿ ಗಂಭೀರವಾಗಿದೆ.