ಕರ್ನಾಟಕ

karnataka

ETV Bharat / bharat

ಬ್ಲಾಕ್​ ಫಂಗಸ್​ ಸಾಂಕ್ರಾಮಿಕ ರೋಗ: ರಾಜಸ್ಥಾನ ಸರ್ಕಾರದಿಂದ ಘೋಷಣೆ

ಬ್ಲಾಕ್​ ಫಂಗಸ್​ ಅನ್ನು ರಾಜಸ್ಥಾನ ಸರ್ಕಾರ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.

By

Published : May 19, 2021, 9:20 PM IST

rajasthan-government-declared-black-fungus-as-epidemic
ಬ್ಲಾಕ್​ ಫಂಗಸ್​ ಸಾಂಕ್ರಾಮಿಕ ರೋಗ

ಜೈಪುರ: ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್​ ಫಂಗಸ್ ಸಾಂಕ್ರಾಮಿಕ ರೋಗ ಎಂದು ​ರಾಜಸ್ಥಾನ ಸರ್ಕಾರ ಘೋಷಿಸಿದೆ.

ಈ ರೋಗ ಕೊರೊನಾದ ಅಡ್ಡಪರಿಣಾಮವಾಗಿ ಬರುತ್ತಿದೆ. ಬ್ಲಾಕ್​ ಫಂಗಸ್ ಮತ್ತು ಕೋವಿಡ್ ಸಂಘಟಿತ ರೀತಿಯಲ್ಲಿ ಚಿಕಿತ್ಸೆ ನೀಡಬೇಕಾಗಿದೆ. ಈ ಕಾರಣದಿಂದಾಗಿ ಕಪ್ಪು ಶಿಲೀಂಧ್ರವನ್ನು ಸಾಂಕ್ರಾಮಿಕ ಕಾಯ್ದೆಯಡಿ ಇಡೀ ರಾಜ್ಯದಲ್ಲಿ ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ.

ಮುಕಾರಮೈಕೋಸಿಸ್ (ಕಪ್ಪು ಶಿಲೀಂಧ್ರ) ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ ಅಂತಾ ಔಷಧ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಖಿಲ್ ಅರೋರಾ ಮಾಹಿತಿ ನೀಡಿದ್ದಾರೆ.

ಓದಿ:ಮಳೆಗಾಲದಲ್ಲಿ ನದಿಗಳಿಂದ ಮರಳು ತೆಗೆಯುವಂತಿಲ್ಲ: ಗಣಿ-ಭೂವಿಜ್ಞಾನ ಇಲಾಖೆ ಆದೇಶ ಎತ್ತಿ ಹಿಡಿದ ಹೈಕೋರ್ಟ್

ABOUT THE AUTHOR

...view details