ಕರ್ನಾಟಕ

karnataka

ETV Bharat / bharat

ಮಲ್ಲಿಕಾರ್ಜುನ ಖರ್ಗೆಗೆ ರಕ್ತದಿಂದ ಪತ್ರ ಬರೆದ ಕಾಂಗ್ರೆಸ್ ನಾಯಕ

ಈ ಪತ್ರವನ್ನು ನನ್ನ ರಕ್ತದಿಂದ ಬರೆಯಲಾಗಿದೆ. ಇದನ್ನು ಓದಿದ ನಂತರ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಅನುಗುಣವಾಗಿ ನೀವು ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂದು ನನಗೆ ಸಂಪೂರ್ಣ ಭರವಸೆ ಮತ್ತು ನಂಬಿಕೆ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಸ್ಥಾನ ಕಾಂಗ್ರೆಸ್ ಮುಖಂಡ ಸುರೇಶ್ ಮಿಶ್ರಾ ಪತ್ರ ಬರೆದಿದ್ದಾರೆ.

rajasthan-congress-leader-sends-letter-written-with-blood-to-kharge
ಮಲ್ಲಿಕಾರ್ಜುನ ಖರ್ಗೆಗೆ ರಕ್ತದಿಂದ ಪತ್ರ ಬರೆದ ಕಾಂಗ್ರೆಸ್ ನಾಯಕ

By

Published : Nov 18, 2022, 10:58 PM IST

ಜೈಪುರ (ರಾಜಸ್ಥಾನ): ಕಾಂಗ್ರೆಸ್ ಮುಖಂಡ ಹಾಗೂ ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಮಿಶ್ರಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಕ್ತದಿಂದ ಬರೆದ ಪತ್ರ ಬರೆದು ರವಾನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಈ ಪತ್ರದ ಮೂಲಕ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಲ್ಲಿ ಏನಾಯಿತು ಎಂಬುದು ನಿಮಗೆ ತಿಳಿದಿದೆ. ರಾಹುಲ್ ಗಾಂಧಿ ಡಿಸೆಂಬರ್‌ನಲ್ಲಿ ತಮ್ಮ 'ಭಾರತ್ ಜೋಡೋ ಯಾತ್ರೆ'ಯೊಂದಿಗೆ ರಾಜಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಅಭೂತಪೂರ್ವ ಸ್ವಾಗತವನ್ನು ನೀಡಬಾರದು ಎಂದು ಬಯಸುತ್ತಾರೆ. ನೀವು ಆದಷ್ಟು ಬೇಗ ರಾಜಸ್ಥಾನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂದು ಪಕ್ಷದ ಸಾಮಾನ್ಯ ಕಾರ್ಯಕರ್ತರು ಮತ್ತು ರಾಜ್ಯದ ಜನರು ನಿರೀಕ್ಷಿಸುತ್ತಾರೆ ಎಂದು ತಮ್ಮ ಪತ್ರದಲ್ಲಿ ಮಿಶ್ರಾ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗೆ ರಕ್ತದಿಂದ ಪತ್ರ ಬರೆದ ಕಾಂಗ್ರೆಸ್ ನಾಯಕ

ಅಲ್ಲದೇ, 52 ದಿನ ಕಳೆದರೂ ಅನಿರ್ದಿಷ್ಟ ಸ್ಥಿತಿ ನಿರ್ಮಾಣವಾಗಿದ್ದು, ಅಜಯ್ ಮಾಕೇನ್ ಕೂಡ ಅನಿರ್ದಿಷ್ಟ ನಿರ್ಧಾರದಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅಜಯ್ ಮಾಕೇನ್ ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತೇವೆ. ಇದರಿಂದ ನಮ್ಮ ಸರ್ಕಾರವು ಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಮತ್ತು ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದೂ ಮಿಶ್ರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪತ್ರವನ್ನು ನನ್ನ ರಕ್ತದಿಂದ ಬರೆಯಲಾಗಿದೆ. ಇದನ್ನು ಓದಿದ ನಂತರ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಅನುಗುಣವಾಗಿ ನೀವು ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂದು ನನಗೆ ಸಂಪೂರ್ಣ ಭರವಸೆ ಮತ್ತು ನಂಬಿಕೆ ಇದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಹಳೆ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್​ ಸಚಿವ ಸಂಪುಟ ಅನುಮೋದನೆ

ABOUT THE AUTHOR

...view details