ಭರತ್‌ಪುರ (ರಾಜಸ್ಥಾನ) : ಭರತ್‌ಪುರದ ಅಟ್ಟಾರಿ ಗ್ರಾಮದ ರೈತನ ಮಗನಾದ ಭಜನ್‌ಲಾಲ್ ಶರ್ಮಾ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಡಿ.15 ರಂದು ಅಧಿಕಾರ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿಗಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು, ದಾನ ಮತ್ತು ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನೆರೆಹೊರೆಯವರಾದ ಪ್ರಭಾಕರ ಶರ್ಮಾ, ಭಜನ್ ಲಾಲ್ ಅವರು ಆಧ್ಯಾತ್ಮಿಕ ಸ್ವಭಾವದ ವ್ಯಕ್ತಿಯಾಗಿದ್ದು, ಗಿರಿರಜ್ಜಿ ದೇವರಲ್ಲಿ (Lord Girirajji) ಅಪಾರ ನಂಬಿಕೆ ಹೊಂದಿದ್ದಾರೆ. ಅವರು ತಿಂಗಳಿಗೆ ಮೂರ್ನಾಲ್ಕು ಬಾರಿ ಪೂಂಚ್ರಿ ಕಾ ಲೋಥಾದಲ್ಲಿರುವ ಗಿರಿರಜ್ಜಿ ಮತ್ತು ಶ್ರೀನಾಥ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಮತ್ತು ತಮ್ಮ ಹೊಲದಲ್ಲಿ ಬೆಳೆಯುವ ಧಾನ್ಯಗಳನ್ನು ಹಸುಗಳಿಗೆ ದಾನ ಮಾಡುತ್ತಾರೆ. ಅಷ್ಟೇ ಅಲ್ಲದೆ, ಬಿಜೆಪಿ ನಾಯಕರು ಶ್ರೀನಾಥ ದೇವಸ್ಥಾನ ಟ್ರಸ್ಟ್‌ನ ಸದಸ್ಯರೂ ಆಗಿದ್ದು, ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರತಿ ತಿಂಗಳು ಸಮುದಾಯದ ಹಬ್ಬವನ್ನು ಆಯೋಜಿಸುತ್ತಾರೆ ಎಂದು ಹೇಳಿದರು.
ಭಜನ್‌ಲಾಲ್ ಶರ್ಮಾ ಅವರು ಗ್ರಾಮದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು, ರಾಬಿ ಮತ್ತು ಖಾರಿಫ್ ಎರಡೂ ಬೆಳೆಗಳನ್ನು ಬೆಳೆಯಲಾಗುತ್ತದೆ. ಮತ ಎಣಿಕೆಗೆ ಮುಂಚೆಯೇ ಡಿಸೆಂಬರ್ 1 ರಂದು ಮುಖ್ಯಮಂತ್ರಿಗಳು ಪೂಂಚ್ರಿ ಕಾ ಲೋಥಾದಲ್ಲಿರುವ ಶ್ರೀನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಗವಾನ್ ಶ್ರೀನಾಥ ಮತ್ತು ಗಿರಿರಜ್ಜಿ ದೇವರ ದರ್ಶನ ಪಡೆದಿದ್ದರು ಎಂದು ತಿಳಿಸಿದರು.