ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ - DA of employees

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

Rajasthan CM Ashok Gehlot
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

By

Published : Sep 29, 2022, 4:03 PM IST

ಜೈಪುರ(ರಾಜಸ್ಥಾನ):ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲು ಕೇಂದ್ರ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ. ಜುಲೈ 1, 2022ರಿಂದ ಅನ್ವಯವಾಗುವಂತೆ ರಾಜ್ಯದ ನೌಕರರು ಮತ್ತು ಪಿಂಚಣಿದಾರರಿಗೆ ಶೇ.38ರಷ್ಟು ತುಟ್ಟಿಭತ್ಯೆ ಪಾವತಿಸಲಾಗುವುದು ಎಂಬುದನ್ನು ರಾಜಸ್ಥಾನ ಮುಖ್ಯಮಂತ್ರಿ ಕಚೇರಿ (CMO) ಬಹಿರಂಗಪಡಿಸಿದೆ.

ಇನ್ನೂ ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆ ವಿಚಾರವಾಗಿ ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಇದೀಗ ಕಾಂಗ್ರೆಸ್​ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಹಿಂದೆ ಸರಿದಿದ್ದು, ಶಶಿ ತರೂರ್​ ಮತ್ತು ದಿಗ್ವಿಜಯ್​ ಸಿಂಗ್​ ಮಧ್ಯೆ ಫೈಟ್​ ನಡೆಯಲಿದೆ.

ಇದನ್ನೂ ಓದಿ:ಕಾಂಗ್ರೆಸ್​ ಅಧ್ಯಕ್ಷ ರೇಸ್​ನಿಂದ ಗೆಹ್ಲೋಟ್ ಔಟ್​: ಶಶಿ ತರೂರ್​- ದಿಗ್ವಿಜಯ್​ ಸಿಂಗ್ ಮಧ್ಯೆ​ ಫೈಟ್​

ABOUT THE AUTHOR

...view details