ಜೈಪುರ್(ರಾಜಸ್ಥಾನ): ಡಿಸಿಎಂ ಸಚಿನ್ ಪೈಲಟ್ (Sachin Pilot) ಹಾಗೂ ತಮ್ಮ ಬಣದ ಬಲ ಸರಿದೂಗಿಸುವ ಸವಾಲು ಎದುರಿಸುತ್ತಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (CM Ashok Gehlot) ಅವರ ಸಚಿವ ಸಂಪುಟಕ್ಕೆ ನೂತನ ಸಚಿವರು ಸೇರ್ಪಡೆಯಾಗುತ್ತಿದ್ದಾರೆ.
Rajasthan Cabinet rejig: ರಾಜಸ್ಥಾನ ಸಂಪುಟದಲ್ಲಿ 12 ಹೊಸಬರಿಗೆ ಮಂತ್ರಿ ಸ್ಥಾನ; ಪೈಲಟ್ ಬಣದ ಐವರಿಗೆ ಅವಕಾಶ ಸಾಧ್ಯತೆ - 15 ಮಂದಿ ನೂತನ ಸಚಿವರ ಪ್ರಮಾಣ ವಚನ
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಸಚಿವ ಸಂಪುಟವನ್ನು ಪುನಾರಚನೆ (Rajasthan Cabinet rejig) ಮಾಡುತ್ತಿದ್ದು, ಇಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಮಾಹಿತಿ ಲಭ್ಯವಾಗಿದೆ.
ಈ ಪೈಕಿ 12 ಮಂದಿ ಹೊಸಬರು ಹಾಗು ಪೈಲಟ್ ಬಣದ ಐವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ. ಗೆಹ್ಲೋಟ್ ನೇತೃತ್ವದ ಹೊಸ ಸಚಿವ ಸಂಪುಟದ 30 ಸಚಿವರ ಪೈಕಿ ಐವರು ಪೈಲಟ್ ಅವರ ನಿಷ್ಠಾವಂತರನ್ನು ಸೇರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್‌ರಚನೆ ವಿಚಾರವಾಗಿ ಹಗ್ಗಜಗ್ಗಾಟ (Rajasthan Cabinet rejig) ನಡೆಯುತ್ತಿತ್ತು. ಅಶೋಕ್ ಗೆಹ್ಲೋಟ್ ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ನಿನ್ನೆ ರಾತ್ರಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಸಂಪರ್ಕಿಸಿ ಪ್ರಮಾಣ ವಚನಕ್ಕೆ ಕಾರ್ಯಕ್ರಮಕ್ಕೆ ಅವಕಾಶ ಕೋರಿದ್ದಾರೆ.