ಜೈಪುರ,(ರಾಜಸ್ಥಾನ) :ಬಹುನಿರೀಕ್ಷಿತ ರಾಜಸ್ಥಾನ ಸರ್ಕಾರದ (Rajasthan Government) ಸಚಿವ ಸಂಪುಟ ವಿಸ್ತರಣೆಯಾಗಿದೆ. 11 ಮಂದಿ ಕ್ಯಾಬಿನೆಟ್ ಸಚಿವರು ಮತ್ತು ನಾಲ್ವರು ಸಚಿವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ (Governor Kalraj Mishra) ಪ್ರಮಾಣ ವಚನ ಬೋಧಿಸಿದ್ದಾರೆ.
ಮಮತಾ ಭೂಪೇಶ್, ಭಜನ್ ಲಾಲ್ ಜಾತವ್ ಮತ್ತು ಟಿಕಾರಾಂ ಜುಲ್ಲಿ ಅವರು ಮೊದಲು ಸಚಿವರಾಗಿದ್ದು, ಈಗ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಹಿಂದಿನ ವರ್ಷ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.