ಜೈಪುರ(ರಾಜಸ್ಥಾನ):ಮದುವೆ ಮಾಡುವ ಸಂದರ್ಭದಲ್ಲಿ ವರನ ಕಡೆಯವರಿಗೆ ವಧುವಿನ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವರದಕ್ಷಿಣೆ ರೂಪದಲ್ಲಿ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತನ್ನ ಗಂಡನಿಗೆ ನೀಡುವ ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್ ಕಟ್ಟಿಸುವಂತೆ ಕೇಳಿಕೊಂಡಿದ್ದಾಳೆಂದು ವರದಿಯಾಗಿದೆ.
ಬಾರ್ಮರ್ ನಗರದ ಕಿಶೋರ್ ಸಿಂಗ್ ಕಾನೋಡ್ ಅವರ ಪುತ್ರಿ ಅಂಜಲಿ ಕನ್ವರ್ ನವೆಂಬರ್ 21ರಂದು ಪ್ರವೀಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿವೊಂದರ ಪ್ರಕಾರ, ಅಂಜಲಿ ಮದುವೆಯಲ್ಲಿ ವರದಕ್ಷಿಣೆಗಾಗಿ ಮೀಸಲಿಟ್ಟಿರುವ ಹಣದ ಬಗ್ಗೆ ತಂದೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಎಲ್ಲ ಹಣ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಬಳಸುವಂತೆ ತಿಳಿಸಿದ್ದಾರೆ. ಮಗಳ ಆಸೆಯಂತೆ ಅಂಜಲಿ ತಂದೆ ಕಿಶೋರ್ ಸಿಂಗ್ ಒಪ್ಪಿಗೆ ಸೂಚಿಸಿ, 75 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕಾಗಿ ನೀಡಿದ್ದಾರೆ.