ಕರ್ನಾಟಕ

karnataka

ETV Bharat / bharat

ಬುಡಕಟ್ಟು ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದ ರಾಜಸ್ಥಾನ : ಏನಿದೆ ಇದರಲ್ಲಿ? - ಸಮುದಾಯದ ಸಮಗ್ರ ಅಭಿವೃದ್ಧಿ

ಈ ನೂತನ ಯೋಜನೆಯಡಿ ಬುಡಕಟ್ಟು ಸಮುದಾಯವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ತರಲು ಶ್ರಮಿಸಲಾಗುತ್ತದೆ. ಈ ಮುಖಾಂತರ ಬುಡಕಟ್ಟು ಸಮುದಾಯ ಸುಂದರವಾದ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ..

ಬುಡಕಟ್ಟು ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದ ರಾಜಸ್ಥಾನ
ಬುಡಕಟ್ಟು ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದ ರಾಜಸ್ಥಾನ

By

Published : Jul 23, 2021, 7:25 PM IST

ಜೈಪುರ, ರಾಜಸ್ಥಾನ :ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಉನ್ನತಿಗಾಗಿ ಬುಡಕಟ್ಟು ಭಾಗವಹಿಸುವಿಕೆ ಯೋಜನೆಗೆ ರಾಜಸ್ಥಾನ ಸರ್ಕಾರ ಅನುಮೋದನೆ ನೀಡಿದೆ. ಆಗಸ್ಟ್ 9ರಂದು ವಿಶ್ವ ಬುಡಕಟ್ಟು ದಿನದಂದು ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ.

ಈ ಯೋಜನೆಯಡಿ ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಲಾಗುವುದು. ಇದರಲ್ಲಿ ನಿರ್ಮಾಣ ಮತ್ತು ದುರಸ್ತಿ, ಸಮುದಾಯ ಆಸ್ತಿಗಳ ರಕ್ಷಣೆ ಹಾಗೂ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ, ಡೈರಿ, ಪಶುಸಂಗೋಪನೆ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.

ಬುಡಕಟ್ಟು ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದ ರಾಜಸ್ಥಾನ

ಯೋಜನೆಯಡಿ ಮಾಡಬೇಕಾದ ಕೆಲಸ ಮತ್ತು ಚಟುವಟಿಕೆಗಳಿಗೆ, ಅಗತ್ಯವಿರುವ ಮೊತ್ತದ ಕನಿಷ್ಠ 30 ಪ್ರತಿಶತವನ್ನು ಸಾರ್ವಜನಿಕರ ಬೆಂಬಲ, ಸ್ವಯಂಸೇವಾ ಸಂಸ್ಥೆಗಳು, ದಾನಿಗಳು ಅಥವಾ ಯಾವುದೇ ಸರ್ಕಾರಿ ಯೋಜನೆ, ಕಾರ್ಯಕ್ರಮ ಅಥವಾ ನಿಧಿಯಿಂದ ಒದಗಿಸಲಾಗುತ್ತದೆ.

ಯೋಜನೆಯಲ್ಲಿ 10 ಲಕ್ಷ ರೂ.ವರೆಗಿನ ಯೋಜನೆಗಳಿಗೆ ಹಣದ ಅನುಮೋದನೆಯನ್ನು ಜಿಲ್ಲಾಧಿಕಾರಿ ನೀಡುತ್ತಾರೆ. 10 ಲಕ್ಷ ರೂ.ಗಳಿಗಿಂತ ಹೆಚ್ಚು ಮತ್ತು 25 ಲಕ್ಷ ರೂ.ಗಳವರೆಗೆ ಬುಡಕಟ್ಟು ಪ್ರಾದೇಶಿಕ ಅಭಿವೃದ್ಧಿ ಮತ್ತು ಬುಡಕಟ್ಟು ಪ್ರಾದೇಶಿಕ ಅಭಿವೃದ್ಧಿ ಇಲಾಖೆಯ ಆಯುಕ್ತರು ಅನುಮೋದನೆ ನೀಡುತ್ತಾರೆ.

ABOUT THE AUTHOR

...view details