ಕರ್ನಾಟಕ

karnataka

ETV Bharat / bharat

ಸಾಲ ತೀರಿಸದ್ದಕ್ಕೆ ರೈತರ ಜಮೀನು ಹರಾಜು ಹಾಕಿದ ಬ್ಯಾಂಕ್​​ ಸಿಬ್ಬಂದಿ.. ಮನವಿಗೂ ಸಿಗದ ಮನ್ನಣೆ - ರಾಜಸ್ಥಾನದಲ್ಲಿ ರೈತನ ಜಮೀನು ಹರಾಜು

ಬ್ಯಾಂಕ್​ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಿಗಳು ರೈತರ ಜಮೀನು ಹರಾಜು ಹಾಕಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

farmer land was auctioned in Rajasthan
farmer land was auctioned in Rajasthan

By

Published : Jan 19, 2022, 3:37 PM IST

ರಾಮಗಢ(ರಾಜಸ್ಥಾನ):ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಅಶೋಕ್​ ಗೆಹ್ಲೋಟ್​ ಈ ಹಿಂದೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೇ ಕಾರಣಕ್ಕಾಗಿ ಲಕ್ಷಾಂತರ ಅನ್ನದಾತರು ಸಾಲ ಮರುಪಾವತಿ ಮಾಡದೇ ಸುಮ್ಮನಾಗಿಬಿಟ್ಟರು. ಇದೀಗ, ರೈತರ ಹಿಂದೆ ಬ್ಯಾಂಕ್​ ಸಿಬ್ಬಂದಿ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದ್ದಾರೆ.

ರಾಜಸ್ಥಾನದ ರಾಮಗಢದ ಪಂಚ್ವಾರಾ ಗ್ರಾಮದಲ್ಲಿ ಬ್ಯಾಂಕ್​ನಿಂದ ಕೃಷಿ ಸಾಲ ಪಡೆದುಕೊಂಡಿದ್ದ ರೈತರ ಜಮೀನನ್ನು ಬ್ಯಾಂಕ್​ ಸಿಬ್ಬಂದಿ ಹರಾಜು ಹಾಕಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿರಿ:ಮೂರು ದಿನಗಳಿಂದ ಕೆಸರಿನ ಹೊಂಡದಲ್ಲಿ ಸಿಲುಕಿದ್ದ ವೃದ್ಧನ ರಕ್ಷಿಸಿದ SI.. ಮಾನವೀಯತೆಗೆ ಮೆಚ್ಚುಗೆ..

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೈತ ಪಪ್ಪು ಲಾಲ್​, ಈ ಹಿಂದೆ ನನ್ನ ತಂದೆ ಬ್ಯಾಂಕ್​ನಲ್ಲಿ ಸಾಲ ಮಾಡಿದ್ದರು. ಆದರೆ, ಈಗಾಗಲೇ ಅವರು ತೀರಿಕೊಂಡಿದ್ದಾರೆ. ಅಸಲು ಮತ್ತು ಬಡ್ಡಿ ಸೇರಿ ಹೆಚ್ಚಿನ ಹಣವಾಗಿರುವ ಕಾರಣ ನಮ್ಮಿಂದ ಪಾವತಿಸಲು ಇದೀಗ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗೆ ಬ್ಯಾಂಕ್​ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಕೆಲ ವರ್ಷಗಳ ಕಾಲ ಸಮಯವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳದೇ ಜಮೀನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ 2019ರ ವಿಧಾಸನಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷಿ ಸಾಲ ಮನ್ನಾ ಮಾಡುವುದಾಗಿ ರಾಹುಲ್​ ಗಾಂಧಿ ಭರವಸೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಇದೀಗ ಕಾಂಗ್ರೆಸ್​ ಅಧಿಕಾರ ನಡೆಸುತ್ತಿದ್ದು, ರೈತರ ಸಾಲ ಮನ್ನಾ ಆಗಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ವಾಗ್ದಾಳಿ ಸಹ ನಡೆಸಿತ್ತು.

ABOUT THE AUTHOR

...view details