ಕರ್ನಾಟಕ

karnataka

ETV Bharat / bharat

ಕಲುಷಿತ ನೀರು ಸೇವನೆ: ಮಕ್ಕಳು ಸೇರಿದಂತೆ 119 ಮಂದಿ ಆಸ್ಪತ್ರೆಗೆ ದಾಖಲು - ರಾಜಸ್ಥಾನದಲ್ಲಿ ಕಲುಸಿತ ನೀರು ಸೇವನೆ ಪ್ರಕರಣ

ರಾಜಸ್ಥಾನದ ಗ್ರಾಮವೊಂದರ ಬಾವಿಯಲ್ಲಿನ ಕಲುಷಿತ ನೀರು ಸೇವನೆ ಮಾಡಿ, ಮಹಿಳೆಯರು, ಮಕ್ಕಳು ಸೇರಿದಂತೆ 119 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Several ill due to contaminated water in Karauli
Several ill due to contaminated water in Karauli

By

Published : Jun 3, 2022, 11:41 AM IST

Updated : Jun 3, 2022, 11:47 AM IST

ಕರೌಲಿ(ರಾಜಸ್ಥಾನ):ರಾಜಸ್ಥಾನದ ಕರೌಲಿಯಲ್ಲಿ ಬಾವಿಯಲ್ಲಿನ ಕಲುಷಿತ ನೀರು ಸೇವನೆ ಮಾಡಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 119 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಮಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದಲ್ಲಿನ ಬಾವಿಯಲ್ಲಿ ಕಲುಷಿತ ನೀರು...

ಲಭ್ಯವಾಗಿರುವ ಮಾಹಿತಿ ಪ್ರಕಾರ, 43 ಮಹಿಳೆಯರು, 39 ಮಕ್ಕಳು ಸೇರಿದಂತೆ ಒಟ್ಟು 119 ಗ್ರಾಮಸ್ಥರು ಕಲುಷಿತ ನೀರು ಸೇವಿಸಿದ್ದಾರೆ. ಇವರಿಗೆ ವಾಂತಿ-ಭೇದಿ ಆರಂಭಗೊಂಡಿದ್ದರಿಂದ ತಕ್ಷಣವೇ ಕರಣಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದು, ವಿಶೇಷ ವೈದ್ಯಕೀಯ ತಂಡ ಗ್ರಾಮಕ್ಕೆ ಭೇಟಿ ನೀಡಿದೆ.

ಅದೃಷ್ಟ ಪರೀಕ್ಷೆಯಲ್ಲಿ ಸಿಎಂ ಧಾಮಿಗೆ ಗೆಲುವು... ಚಂಪಾವತ್​ ಉಪ ಚುನಾವಣೆಯಲ್ಲಿ ಜಯಭೇರಿ

ಗ್ರಾಮದ ಬಾವಿಯಲ್ಲಿರುವ ನೀರಿನಲ್ಲಿ ಜೀವಂತ ಕೀಟಗಳು ಪತ್ತೆಯಾಗಿದ್ದು, ಈ ನೀರು ಕುಡಿದಿರುವ ಕಾರಣ ಈ ತೊಂದರೆ ಕಾಣಿಸಿಕೊಂಡಿದೆ. ಸದ್ಯಕ್ಕೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಬಾವಿಯಲ್ಲಿನ ನೀರು ಕುಡಿಯದಂತೆ ಆರೋಗ್ಯ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

Last Updated : Jun 3, 2022, 11:47 AM IST

ABOUT THE AUTHOR

...view details