ಜೈಪುರ( ರಾಜಸ್ಥಾನ): ರಾಜಸ್ಥಾನದಾದ್ಯಂತ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು 'ನೋ ಬ್ಯಾಗ್ ಡೇ' ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚೆಸ್ ಆಡಲು ಅವಕಾಶ ಒದಗಿಸಲಾಗಿದೆ. ಸಮಾರಂಭವೊಂದರಲ್ಲಿ ರಾಜ್ಯ ಶಿಕ್ಷಣ ಸಚಿವ ಡಾ. ಬಿ. ಡಿ ಕಲ್ಲಾ ಮಾತನಾಡಿ, ನವೆಂಬರ್ 19 ರಿಂದ ರಾಜಸ್ಥಾನದ ಎಲ್ಲಾ ಶಾಲೆಗಳಲ್ಲಿ ಈ ಕಾರ್ಯಕ್ರಮವು ಏಕಕಾಲದಲ್ಲಿ ಪ್ರಾರಂಭವಾಗಲಿದೆ. ಮಕ್ಕಳ ಮಾನಸಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದರು.
ರಾಜಸ್ಥಾನದ ಶಾಲೆಗಳಲ್ಲಿ ತಿಂಗಳ 3ನೇ ಶನಿವಾರ ಚೆಸ್ ಕಲಿಕೆಗೆ ಅವಕಾಶ - ಶಾಶ್ವತ ಲೋಕ ಅದಾಲತ್ ಅಧ್ಯಕ್ಷ ಮಹೇಶ್ ಶರ್ಮಾ
ಶಾಲೆಗಳಲ್ಲಿ ಚೆಸ್ ಕಾರ್ಯಕ್ರಮ ಆರಂಭವಾಗುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ಜ್ಞಾಪಕ ಶಕ್ತಿ, ಶಿಸ್ತು, ಆತ್ಮಾವಲೋಕನ ಹೆಚ್ಚಿಸಿಕೊಳ್ಳಲು ಅವಕಾಶ ಸಿಗಲಿದೆ ಎಂದು ರಾಜಸ್ಥಾನ ಶಿಕ್ಷಣ ಸಚಿವ ಡಾ ಬಿ ಡಿ ಕಲ್ಲಾ ಅವರು ತಿಳಿಸಿದ್ದಾರೆ.
ಚೆಸ್
‘ಶಾಲೆಯಲ್ಲಿ ಚೆಸ್’ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಏಕಾಗ್ರತೆ, ಜ್ಞಾಪಕ ಶಕ್ತಿ, ಶಿಸ್ತು, ಆತ್ಮಾವಲೋಕನ ಹೆಚ್ಚಿಸಿಕೊಳ್ಳಲು ಅವಕಾಶ ಸಿಗಲಿದೆ. ಸ್ಮಾರ್ಟ್ಫೋನ್ಗಳ ಋಣಾತ್ಮಕ ಪ್ರಭಾವದ ನಡುವೆ, ಭವಿಷ್ಯದ ಪೀಳಿಗೆಯ ಮನಸ್ಸನ್ನು ಹೆಚ್ಚು ಸೃಜನಶೀಲಗೊಳಿಸಲು ಈ ಉಪಕ್ರಮ ಸಹಕಾರಿ. ಈ ಆಟಗಳು ಶಾಲೆಯಿಂದ ಚಾಂಪಿಯನ್ಗಳನ್ನು ಹೊರತರುತ್ತವೆ. ಮತ್ತು ವಿಶ್ವದಲ್ಲಿ ರಾಜಸ್ಥಾನಕ್ಕೆ ಪ್ರಶಸ್ತಿಗಳನ್ನು ತರಲಿವೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.