ಮುಂಬೈ: ಉದ್ಯಮಿ ರಾಜ್ ಕುಂದ್ರಾ ವಿರುದ್ಧದ ಪೋರ್ನೋಗ್ರಫಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಪ್ರಾಪರ್ಟಿ ಸೆಲ್ ಬುಧವಾರ 1500 ಪುಟಗಳ ಪೂರಕ ಚಾರ್ಜ್ ಶೀಟ್ ಅನ್ನು ಎಸ್ಪ್ಲನೇಡ್ ನ್ಯಾಯಾಲಯಕ್ಕೆ (Esplanade Court) ಸಲ್ಲಿಸಿದೆ.
ಈ ಪ್ರಕರಣದ ಕುರಿತು ಗುರುವಾರ ಮಾಹಿತಿ ಹಂಚಿಕೊಂಡಿರುವ ಮುಂಬೈ ಪೊಲೀಸರು, 1500 ಪುಟಗಳ ಚಾರ್ಜ್ಶೀಟ್ನಲ್ಲಿ ಕುಂದ್ರಾ ಅವರ ಪತ್ನಿ ಮತ್ತು ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳಿವೆ. ನಟಿಯರಾದ ಶೆರ್ಲಿನ್ ಚೋಪ್ರಾ, ಸೆಜಲ್ ಶಾ, ಹಲವು ಮಾಡೆಲ್ಗಳ ಹೇಳಿಕೆಗಳೂ ಈ ಚಾರ್ಜ್ಶೀಟ್ನಲ್ಲಿವೆ.