ಕರ್ನಾಟಕ

karnataka

ETV Bharat / bharat

ಅಶ್ಲೀಲ ವಿಡಿಯೋ ಚಿತ್ರೀಕರಣ ಕೇಸ್: ಜೈಲಿನಿಂದ ಉದ್ಯಮಿ ರಾಜ್​ಕುಂದ್ರಾ ರಿಲೀಸ್

ಪೋರ್ನ್ ವಿಡಿಯೋ ಚಿತ್ರೀಕರಣ ಸಂಬಂಧ ಬಂಧಿಯಾಗಿದ್ದ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ಕುಂದ್ರಾ ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ.

ರಾಜ್​ಕುಂದ್ರಾ ರಿಲೀಸ್
ರಾಜ್​ಕುಂದ್ರಾ ರಿಲೀಸ್

By

Published : Sep 21, 2021, 12:35 PM IST

ಮುಂಬೈ(ಮಹಾರಾಷ್ಟ್ರ): ಅಶ್ಲೀಲ ಚಿತ್ರ ಪ್ರಕರಣ ಸಂಬಂಧ ಎರಡು ತಿಂಗಳ ಹಿಂದೆ ಬಂಧಿತನಾಗಿದ್ದ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಅಶ್ಲೀಲ ಚಿತ್ರಗಳ ತಯಾರಿಕೆ ಸಂಬಂಧ ಜುಲೈ 19ರಂದು ಬಂಧಿಯಾಗಿದ್ದ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌, 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ಪಡೆದು ಜಾಮೀನು ನೀಡಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಇತ್ತೀಚೆಗೆ ಕುಂದ್ರಾ ವಿರುದ್ಧ 1,400 ಪುಟಗಳ ಚಾರ್ಜ್​​ಶೀಟ್ ಅನ್ನು ನ್ಯಾಯಾಲಯಕ್ಕೆ​ ಸಲ್ಲಿಸಿದ್ದರು. ಅಲ್ಲದೇ ಅಧಿಕಾರಿಗಳು, ನಟಿ ಶಿಲ್ಪಾಶೆಟ್ಟಿ ಸೇರಿ 43 ಸಾಕ್ಷಿಗಳ ಹೇಳಿಕೆಗಳನ್ನು ಪಟ್ಟಿ ಮಾಡಿದ್ರು.

ಇದನ್ನೂ ಓದಿ: ತನಿಖೆ ವೇಳೆ ಬಯಲು... ರಾಜ್​ ಕುಂದ್ರಾ ಮೊಬೈಲ್​, ಲ್ಯಾಪ್​ನಲ್ಲಿ 119 ಪೋರ್ನ್​ ವಿಡಿಯೋಗಳು ಪತ್ತೆ!

ಬಳಿಕ ರಾಜ್​ ಕುಂದ್ರಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೆ ನೀಡಿದ್ದರು. ರಾಜ್​ ಕುಂದ್ರಾ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಉದ್ಯಮಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇವರ ಮನವಿ ಆಲಿಸಿದ ನ್ಯಾಯಾಲಯ ಜಾಮೀನು ನೀಡಿದೆ.

ABOUT THE AUTHOR

...view details