ಕರ್ನಾಟಕ

karnataka

ETV Bharat / bharat

Raj Kundra case: ಅಪರಿಚಿತರಿಂದ ಬೆದರಿಕೆ ಕರೆ ಬರುತ್ತಿವೆ ಎಂದು ದೂರು ನೀಡಿದ ಮಾಡೆಲ್ ಸುಮನ್ - ಒಶಿವಾರಾ ಪೊಲೀಸ್ ಠಾಣೆ

ರಾಜ್ ಕುಂದ್ರಾ ವೆಬ್​ ಸೀರಿಸ್​ಗೆ ನಗ್ನವಾಗಿ ಆಡಿಷನ್ ನೀಡುವಂತೆ ಒತ್ತಾಯಿಸಿದ್ದರು ಎಂಬ ಆರೋಪವನ್ನು ಮಾಡಿದ ಬಳಿಕ ನನಗೆ ಕೊಲೆ, ಅತ್ಯಾಚಾರದ ಬೆದರಿಕೆ ಬರುತ್ತಿವೆ ಎಂದು ಮಾಡೆಲ್ ಸಾಗರಿಕಾ ಶೋನಾ ಸುಮನ್ ದೂರು ನೀಡಿದ್ದಾರೆ.

gettingModel files complaint after getting threats, vulgar calls
ದೂರು ನೀಡಿದ ಮಾಡೆಲ್ ಸುಮನ್

By

Published : Jul 24, 2021, 1:23 PM IST

ಮುಂಬೈ : ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ ಮತ್ತು ಅಶ್ಲೀಲ ಕರೆಗಳು ಬರುತ್ತಿವೆ ಎಂದು ರೂಪದರ್ಶಿ ಸಾಗರಿಕಾ ಶೋನಾ ಸುಮನ್ ಮುಂಬೈನ ಒಶಿವಾರಾ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ರಾಜ್ ಕುಂದ್ರಾ ವಿಷಯಕ್ಕೆ ಸಂಬಂಧಿಸಿದಂತೆ, ಕಳೆದ ಮೂರು ದಿನಗಳಿಂದ ನನಗೆ ಅಜ್ಞಾತ ಸ್ಥಳಗಳಿಂದ ಅಪರಿಚಿತ ವ್ಯಕ್ತಿಗಳಿಂದ ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆಯ ಮತ್ತು ಅಶ್ಲೀಲ ಕರೆಗಳು ಬರುತ್ತಿವೆ. ಈ ಬಗ್ಗೆ ನಾನು ದೂರು ನೀಡಲು ಬಯಸುತ್ತೇನೆ ಎಂದು ಸುಮನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬೆದರಿಕೆ ಸಂದೇಶಗಳ ಹಿನ್ನೆಲೆ ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಸುಮನ್ ತಿಳಿಸಿದ್ದಾರೆ,

ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕೊಲೆ, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಾನು ನನ್ನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತಾತ್ಕಾಲಿಕ ನಿಷ್ಕ್ರೀಯಗೊಳಿಸಿದ್ದೇನೆ. ಯಾಕೆಂದರೆ ನನಗೆ ಆ ಕರೆಗಳಿಂದ ತುಂಬಾ ಕಿರಿ ಕಿರಿ ಉಂಟಾಗುತ್ತಿದೆ. ನಾನು ರಾಜ್​ ಕುಂದ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಲು ಸಿದ್ದಳಿದ್ದೇನೆ ಎಂದು ಸುಮನ್ ಹೇಳಿದ್ದಾರೆ.

ಓದಿ : ನಾವೀಗ ನಿಮ್ಮ ಪತಿ ಅರೆಸ್ಟ್​ ನ್ಯೂಸ್​ ನೋಡ್ಬೇಕಾ..ನಿಮ್ಮ ಸಿನಿಮಾ ನೋಡ್ಬೇಕಾ?: ನೆಟ್ಟಿಗರಿಂದ ಟ್ರೋಲ್​ಗೊಳಗಾದ ಶಿಲ್ಪಾ ಶೆಟ್ಟಿ

ರಾಜ್​ಕುಂದ್ರಾ ಅವರ ಕೆಲವು ಹುಚ್ಚು ಅಭಿಮಾನಿಗಳು ಮತ್ತು ಸ್ನೇಹಿತರು ನನಗೆ ಮತ್ತು ನನ್ನ ಕುಟುಂಬಕ್ಕೆ ಏನು ಬೇಕಾದರೂ ಮಾಡಬಹುದು. ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು. ಹಾಗಾಗಿ, ನನಗೆ ಕರೆ ಮಾಡಿ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಅಗತ್ಯವಿದ್ದರೆ ಎಫ್​ಐಆರ್ ದಾಖಲಿಸಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ನೀಡಲು ನಾನು ಸಿದ್ದ ಎಂದು ಸುಮನ್ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ವಿಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದ ಶೋನಾ ಸುಮನ್, ರಾಜ್​ಕುಂದ್ರಾ ಮತ್ತು ಅವರ ಗೆಳೆಯರ ವಿರುದ್ಧ ಆರೋಪಗಳನ್ನು ಮಾಡಿದ್ದರು.

ರಾಜ್ ಕುಂದ್ರಾ ವೆಬ್​ ಸೀರಿಸ್​ನಲ್ಲಿ ನಟಿಸಲು ನನಗೆ ಅವಕಾಶ ಕೊಟ್ಟಿದ್ದರು. ಆದರೆ, ನನಗೆ ನಗ್ನವಾಗಿ ಆಡಿಷನ್ ಕೊಡುವಂತೆ ಕೇಳಿಕೊಂಡಿದ್ದರು. ಆಗಸ್ಟ್​ 2020 ರಲ್ಲಿ ನನಗೆ ವಿಡಿಯೋ ಕಾಲ್ ಮಾಡಿದ್ದ ಉಮೇಶ್ ಕಾಮತ್ ಎಂಬಾತ, ಕುಂದ್ರಾ ವೆಬ್​ ಸೀರಿಸ್​ನಲ್ಲಿ ನಟಿಸಲು ನಗ್ನವಾಗಿ ಆಡಿಷನ್ ಕೊಡುವಂತೆ ಒತ್ತಾಯಿಸಿದ್ದ ಸುಮನ್ ಆರೋಪಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಮಾಧ್ಯಮಗೋಷ್ಠಿ ಕರೆದಿದ್ದ ಸುಮನ್ ಇದೇ ಆರೋಪ ಮಾಡಿದ್ದರು.

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ತ್ರೋಪ್ ಎಂಬವರನ್ನು ಮುಂಬೈ ನ್ಯಾಯಾಲಯವು ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ABOUT THE AUTHOR

...view details