ಹೈದರಾಬಾದ್ (ತೆಲಂಗಾಣ): ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಅವರು ವಿಮಾನದಲ್ಲಿ ಪೈಲಟ್ ಜೊತೆ ಜೋಕ್ ಮಾಡಿ ತೀವ್ರ ವಾಗ್ವಾದ ನಡೆಸಿದ್ದಾರೆ. ಅವರು ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ, ತಡವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪೈಲಟ್ ಜೊತೆ 'ಜೋಕ್' ವಿಚಾರವಾಗಿ ತೀವ್ರ ವಾಗ್ವಾದಕ್ಕಿಳಿದ ರಾಜ್ ಬಬ್ಬರ್ ಪುತ್ರ ಆರ್ಯ ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಪೈಲಟ್‌ನೊಂದಿಗೆ ಜಗಳವಾಡುತ್ತಿದ್ದಾರೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೈಲಟ್ ಬೇಸರಿಸಿಕೊಂಡಿರುವುದು ಕಂಡುಬರುತ್ತದೆ.
ನೀವು 'ಯೇ ಕ್ಯಾ ಚಲೆಗಾ' ಎಂದು ಹೇಳುವುದನ್ನು ನಾನು ಕೇಳಿದೆ' ಅದು ನನಗೆ ಇಷ್ಟವಾಗಲಿಲ್ಲ ಎಂಬುದಾಗಿ ಪೈಲಟ್ ಅವರು ನಟ ಆರ್ಯ ಜೋಕ್ ಮಾಡಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಟ ಆರ್ಯ, ನಾನು ಆ ರೀತಿ ಹೇಳಿದ್ದಲ್ಲ. ನಾನು ನನ್ನ ಸ್ನೇಹಿತನ ಕುರಿತು ಜೋಕ್ ಮಾಡಿದ್ದೇನೆ ಎಂದ ಅವರು, 'ಭಾಯ್ ಯೇ ಅಭಿ ಆಯೆ ಹೈ?' ಎಂದು ಘಟನೆಯಿಂದ ಕೆರಳಿ ಮಾತನಾಡಿದ್ದಾರೆ. ಅಲ್ಲದೇ, ಘಟನೆಯಿಂದ ಸಿಟ್ಟಿಗೆದ್ದ ಅವರು ನಂತರ ಪೈಲಟ್‌ಗೆ ತಮಾಷೆ ಮಾಡಲು ಇಲ್ಲಿ ಅವಕಾಶವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಪೈಲಟ್ ಅವರು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ನಟ ಆರ್ಯ ಕೋಪಗೊಂಡಿದ್ದಾರೆ. 'ನೀವು ನನ್ನನ್ನು ವಿಮಾನದಿಂದ ಇಳಿಸಲು ಪ್ರಯತ್ನಿಸುತ್ತೀರಾ? ಎಂದು ಪೈಲಟ್‌ಗೆ ಪ್ರಶ್ನಿಸಿದ್ದಾರೆ. ಆಗ ಅದಕ್ಕೆ ಪ್ರತ್ಯುತ್ತರವಾಗಿ 'ನಿಮ್ಮನ್ನು ವಿಮಾನದಿಂದ ಇಳಿಯುವಂತೆ ನಾನು ಹೇಳಿದ್ದೇನೆಯೇ? ಎಂದು ಪೈಲಟ್ ಮರು ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಓದಿ:ನುಗ್ಗಿ ಬಂದ ಹಸುಗಳನ್ನು ಎದುರಿಸಿದ ಪಕ್ಷಿ.. ಅದರ ಧೈರ್ಯವೇ ನನಗೆ ಪ್ರೇರಣೆ ಎಂದ ಆನಂದ್ ಮಹೀಂದ್ರಾ