ರಾಯ್ಪುರ: ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಶನಿವಾರ ತಡರಾತ್ರಿ ಇಲ್ಲಿನ ವಿಐಪಿ ರಸ್ತೆಯಲ್ಲಿರುವ ಹೋಟೆಲ್ ಬಳಿ ಯುವಕರು ಮತ್ತು ಯುವತಿಯರ ಮಧ್ಯೆ ಬಿಗ್ ಫೈಟ್ ನಡೆದಿದ್ದು, ಒಬ್ಬರಿಗೊಬ್ಬರು ಕಾಲಿಂದ ಹೊಡೆದಾಡಿಕೊಂಡಿದ್ದಾರೆ.
ಯುವಕರು-ಯುವತಿಯರ ಮಧ್ಯೆ ಬಿಗ್ ಫೈಟ್ ಹೌದು, ಯುವಕ - ಯುವತಿಯರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲಾತಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಆದರೆ, ಈ ಗಲಾಟೆ ನಡೆದರೂ ಸಹ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಈ ಕಾರಣದಿಂದಾಗಿ ಪೊಲೀಸರು ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಹೆಚ್ಚು ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದ ಪೊಲೀಸರು 160 ಕಲಂ ಅಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಓದಿ:ನಡುರಸ್ತೆಯಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ಫೈಟ್.. ವಿಡಿಯೋ
ವಿಐಪಿ ರಸ್ತೆ ಅತ್ಯಂತ ಸೂಕ್ಷ್ಮ ರಸ್ತೆಯಾಗಿದೆ. ಇಲ್ಲಿ ಪೊಲೀಸರು ಯಾವಗಲೂ ಗಸ್ತು ತಿರುಗುತ್ತಿರುತ್ತಾರೆ. ಆದರೆ ಈ ಮಾರ್ಗದಲ್ಲೇ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಆದರೂ ಈ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲದಿರುವುದು ವಿಪರ್ಯಾಸ.
ಈ ಘಟನೆ ನಗರದ ರಾಮ ಮಂದಿರದ ಸ್ವಲ್ಪ ದೂರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ವಿಐಪಿ ರಸ್ತೆಯಲ್ಲಿ ಯುವತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ದರೋಡೆ ಮಾಡಿದ್ದರು. ಇದಕ್ಕೂ ಮುನ್ನ ಈ ಮಾರ್ಗದಲ್ಲಿ ಹಲವು ದರೋಡೆಗಳು ನಡೆದಿವೆ ಎನ್ನಲಾಗಿದೆ.