ನವದೆಹಲಿ: ವಾಯು ಮಾಲಿನ್ಯದಿಂದ ತತ್ತರಿಸುತ್ತಿರುವ ನವದೆಹಲಿಯ ಹಲವು ಭಾಗದಲ್ಲಿ ಶುಕ್ರವಾರ ಸುರಿದ ಮಳೆ ಕೊಂಚ ಧೂಳಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ, ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮತ್ತೆ ಕಳಪೆ ವರ್ಗದಲ್ಲಿ ಕಂಡು ಬಂದಿದೆ. ದೆಹಲಿಯ ಒಟ್ಟಾರೆ ವಾಯುಮಾಲಿನ್ಯ ಮಟ್ಟ 339 ಆಗಿದೆ ಎಂದು ಎಸ್ಎಎಫ್ಎಆರ್ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಆನಂದ್ ವಿಹಾರ್ ಸ್ಟೇಷನ್ನಲ್ಲಿ ವಾಯು ಗುಣಮಟ್ಟ ವರ್ಗ ಈ ಹಿಂದೆ ಪಿಎಂ 2.5 ಕಂಡು ಬಂದಿದ್ದು, ಕಳಪೆ ವರ್ಗದಲ್ಲಿ ಕಂಡು ಬಂದಿತ್ತು. ಇದೀಗ 137 ಆಗಿದ್ದು, ಮಧ್ಯಮ ವರ್ಗದಲ್ಲಿದೆ.
ಶನಿವಾರ ಬೆಳಗ್ಗೆ ಶುದ್ಧ ಮತ್ತು ನೀಲಿ ಆಕಾಶ ಕಂಡು ಬಂದಿದೆ. ಕಳೆದೆರಡು ವಾರಗಳಿಂದ ಇದ್ದ ಮಬ್ಬು ಕವಿದ ವಾತಾವರಣವೂ ಇಂದು ಸೂರ್ಯನ ಬೆಳಕಿನಿಂದ ಕಂಡು ಬಂದಿದೆ. ದೆಹಲಿಯಲ್ಲಿ ಗುರುವಾರ ಎಕ್ಯೂಐ 437 ದಿನವಾಗಿದ್ದು, ಶನಿವಾರ ಬೆಳಗ್ಗೆ ವಾಯು ಗುಣಮಟ್ಟ 219 ದಾಖಲಾಗಿದೆ.
ಶುಕ್ರವಾರ ಬಿದ್ದ ಮಳೆ ಮತ್ತು ಗಾಳಿಯ ವೇಗವು ಸ್ವಲ್ಪಮಟ್ಟಿನ ಮಾಲಿನ್ಯ ಮತ್ತು ಧೂಳಿನ ಪ್ರಮಾಣ ತಗ್ಗಿಸಲು ಸಹಾಯ ಮಾಡಿದೆ. ಶುಕ್ರವಾರ ಗುರುಗ್ರಾಮದಲ್ಲಿ 181, ಗಾಜಿಯಬಾದ್ನಲ್ಲಿ 159, ಗ್ರೇಟರ್ ನೋಯ್ಡಾದಲ್ಲಿ 131, ಫರಿದಾಬಾದ್ 174 ವಾಯುಗುಣಮಟ್ಟ ಕಂಡು ಬಂದಿದೆ.