ರುದ್ರಪ್ರಯಾಗ್ (ಉತ್ತರಾಖಂಡ):ದೇವಭೂಮಿಉತ್ತರಾಖಂಡದಲ್ಲಿ ಹವಾಮಾನ ಪರಿಸ್ಥಿತಿ ಕಠಿಣವಾಗಿದ್ದು, ನಿರಂತರ ಮಳೆಯಿಂದಾಗಿ ಪ್ರವಾಹ, ಭೂಕುಸಿತ ಉಂಟಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರವಾಹ, ಭೂಕುಸಿತಕ್ಕೆ ನಲುಗಿದ 'ದೇವ ಭೂಮಿ' ಜನತೆ - ಉತ್ತರಾಖಂಡ ಪ್ರವಾಹ
ಬೆಟ್ಟಗಳು ಎಲ್ಲೆಡೆ ಬಿರುಕು ಬಿಟ್ಟು ಕುಸಿದು ಬೀಳುತ್ತಿವೆ. ಗ್ರಾಮೀಣ ಭಾಗದ ಜನರು ಯಾವುದೇ ಸಂಪರ್ಕವಿಲ್ಲದೆ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಈ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ..
ಪ್ರವಾಹ, ಭೂಕುಸಿತಕ್ಕೆ ನಲುಗಿದ ಉತ್ತರಾಖಂಡ ಜನತೆ
ಬದರಿನಾಥ ಮತ್ತು ಕೇದಾರನಾಥ ಹೆದ್ದಾರಿಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಭೂಕುಸಿತವಾಗುತ್ತಿದೆ. ಜಲ ಸಂಪನ್ಮೂಲ ಇಲಾಖೆಯ 80 ಯೋಜನೆಗಳು ಮಳೆಯಿಂದಾಗಿ ಹಾಳಾಗಿವೆ. ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಪ್ರವಾಹ, ಭೂಕುಸಿತಕ್ಕೆ ನಲುಗಿದ ಉತ್ತರಾಖಂಡ ಜನತೆ
ಬೆಟ್ಟಗಳು ಎಲ್ಲೆಡೆ ಬಿರುಕು ಬಿಟ್ಟು ಕುಸಿದು ಬೀಳುತ್ತಿವೆ. ಗ್ರಾಮೀಣ ಭಾಗದ ಜನರು ಯಾವುದೇ ಸಂಪರ್ಕವಿಲ್ಲದೆ ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಈ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮನುಜ್ ಗೋಯಲ್ ತಿಳಿಸಿದ್ದಾರೆ.