ಚೆನ್ನೈ: ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ಪ್ರವಾಹ ಉಂಟಾಗಿದೆ. ಇದರ ನಡುವೆ 4625.80 ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಸಿಎಂ ಎಂ.ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಇನ್ನು ಪ್ರವಾಹದ ಹಾನಿಯನ್ನು ಸರಿಪಡಿಸಲು 549.63 ಕೋಟಿ ರೂ.ಗಳ ಪರಿಹಾರ ಧನ ಅಗತ್ಯವಿದೆ, ಶಾಶ್ವತ ನವೀಕರಣಕ್ಕಾಗಿ 2079.89 ಕೋಟಿ ರೂ. ಅಗತ್ಯವಿದೆ, ವಿಪತ್ತು ಪರಿಹಾರ ನಿಧಿಯಿಂದ ಒಟ್ಟು 2629.29 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಬೇಕು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.