ನವದೆಹಲಿ:ಪಿಎಂ ಗತಿ ಶಕ್ತಿ (PM GATI-SHAKTI) ಯೋಜನೆ ಅಡಿ ಮುಂದಿನ 4-5 ವರ್ಷಗಳಲ್ಲಿ 500 ಮಲ್ಟಿಮಾಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸ್ಥಾಪಿಸಲು 50,000 ಕೋಟಿ ರೂಪಾಯಿಯನ್ನು ಭಾರತೀಯ ರೈಲ್ವೆ ಹೂಡಿಕೆ ಮಾಡಲಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, " ಪಿಎಂ ಗತಿ-ಶಕ್ತಿ ಯೋಜನೆಯಡಿ ಮುಂದಿನ 4-5 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವ ಬಹು-ಮಾದರಿ ಕಾರ್ಗೋ ಟರ್ಮಿನಲ್‌ಗಳ ಮೂಲಕ ವಿವಿಧ ಸಾರಿಗೆ ವಿಧಾನಗಳನ್ನು ರೈಲ್ವೆ ಸಾರಿಗೆ ಜಾಲದೊಂದಿಗೆ ಸಂಯೋಜಿಸಲಾಗುವುದು. ಇದು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ರೀತಿಯ ಸುಮಾರು 500 ಮಲ್ಟಿಮಾಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು.