ನವದೆಹಲಿ:ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (Eastern Dedicated Freight Corridor) ನಿರ್ಮಾಣಕ್ಕಾಗಿ ರೈಲ್ವೆ ಸಚಿವಾಲಯ ವಿಶ್ವಬ್ಯಾಂಕ್‌ನಿಂದ 12,543 ಕೋಟಿ ರೂಪಾಯಿ(1775 ಮಿಲಿಯನ್ ಯುಎಸ್ ಡಾಲರ್) ದೀರ್ಘಾವಧಿ ಸಾಲ ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಲಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ವಿಶ್ವಬ್ಯಾಂಕ್‌ನಿಂದ ಮೂರು ಹಂತಗಳಲ್ಲಿ ಸಾಲ ಪಡೆದುಕೊಳ್ಳಲಾಗಿದೆ. ಅಕ್ಟೋಬರ್ 27, 2011, ಡಿಸೆಂಬರ್ 11, 2014 ಮತ್ತು 21 ಅಕ್ಟೋಬರ್ 2016 ಆಗಿದೆ. ಸಾಲದ ಮೊತ್ತವು 555 US$ ಮಿಲಿಯನ್, 660 US$ ಮಿಲಿಯನ್ ಹಾಗೂ 560 US$ ಮಿಲಿಯನ್ ಎಂದು ತಿಳಿಸಿದ್ದಾರೆ.