ಮುಂಬೈ (ಮಹಾರಾಷ್ಟ್ರ):ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಸಾವಿನ ಕದ ತಟ್ಟಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ರೈಲ್ವೆ ಅಧಿಕಾರಿಗಳು ಬಚಾವ್ ಮಾಡಿದ್ದಾರೆ. ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದೆ. ಅರ್ಜುನ್ ಸಾವಿನ ಕದ ತಟ್ಟಿ ಬಂದ ವ್ಯಕ್ತಿ.
ಇದನ್ನೂ ಓದಿ:ನಿವಾರ್ ಹಾವಳಿಗೆ 10ಕ್ಕೂ ಹೆಚ್ಚು ರೈಲುಗಳ ಸ್ಥಗಿತ : ಬುಕ್ಕಿಂಗ್ ಹಣ ಮರುಪಾವತಿಗೆ ನಿರ್ಧಾರ
01021 ಸಂಖ್ಯೆಯ ರೈಲು ಕಲ್ಯಾಣ್ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 4 ರಲ್ಲಿ ತೆರಳುತ್ತಿತ್ತು. ಈ ವೇಳೆ, ಅವಸರವಸರವಾಗಿ ಬಂದ ಅರ್ಜುನ್ ತನ್ನ ಬಳಿ ಇದ್ದ ಸಾಮಗ್ರಿಗಳೊಂದಿಗೆ ಚಲಿಸುತ್ತಿದ್ದ ರೈಲನ್ನು ಏರುತ್ತಿದ್ದಾಗ ಜಾರಿ ಬಿದ್ದಿದ್ದಾನೆ. ತಕ್ಷಣ ಆತನನ್ನು ನೋಡಿದ ರೈಲ್ವೆ ಅಧಿಕಾರಿಗಳು ಸಾವಿನಿಂದ ದೂರ ಮಾಡಿದ್ದಾರೆ. ಅರೆಕ್ಷಣ ತಡವಾಗಿದ್ದರೂ ಅರ್ಜುನ್ ರೈಲಿನಡಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ. ಸರಿಯಾದ ಸಮಯಕ್ಕೆ ಬಂದ ಅಧಿಕಾರಿಗಳು ಆತನನ್ನು ಮೇಲೆತ್ತಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ:ನಕಲಿ ರೈಲ್ವೆ ಟಿಕೆಟ್ಗಳನ್ನ ಮಾರುತ್ತಿದ್ದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ
ಕೆಲವು ಪ್ರಯಾಣಿಕರು ಚಲಿಸುತ್ತಿದ್ದ ರೈಲನ್ನು ಹರಸಾಹಸ ಮಾಡಿ ಹತ್ತಲು ಪ್ರಯತ್ನಿಸುತ್ತಿದ್ದರು. ಗಮನಿಸಿದ ಅಲ್ಲಿನ ಪೊಲೀಸರು ಅವರನ್ನು ತಡೆದು ನಿಲ್ಲಿಸಿದ್ದರು. ಇವರ ಮಧ್ಯೆ ಅರ್ಜುನ್ ಚಲಿಸುವ ರೈಲು ಹತ್ತಲು ಪ್ರಯತ್ನಿಸಿ ಜಾರಿ ಬಿದ್ದು ಬಿದ್ದಿದ್ದನು.