ಮುಂಬೈ:ಸೆಂಟ್ರಲ್ ರೈಲ್ವೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಿಂದ ಹೊರಟಿದ್ದ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ವ್ಯಕ್ತಿಯು ರೈಲಿನಡಿ ಸಿಲುಕಿ ಸಂಭವಿಸಬಹುದಾದ ಅನಾಹುತವನ್ನು ಸಿಬ್ಬಂದಿ ತಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೈಲು ಏರಲು ಯತ್ನಿಸಿ ಕೆಳಗೆಬಿದ್ದ ಪ್ರಯಾಣಿಕ: ದೇವರಂತೆ ಬಂದು ಕಾಪಾಡಿದ ರೈಲ್ವೆ ಸಿಬ್ಬಂದಿ - ರೈಲು ಏರಲು ಯತ್ನಿಸಿ ಕೆಳಗೆಬಿದ್ದ ಪ್ರಯಾಣಿಕ
ರೈಲು ಹತ್ತುವ ತರಾತುರಿಯಲ್ಲಿ ಆಯತಪ್ಪಿ ಬಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೈಲು ಏರಲು ಯತ್ನಿಸಿ ಕೆಳಗೆಬಿದ್ದ ಪ್ರಯಾಣಿಕ.. ದೇವರಂತೆ ಬಂದು ಕಾಪಾಡಿದ ರೈಲ್ವೆ ಸಿಬ್ಬಂದಿ
ಮುಂಬೈ-ಮಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಹತ್ತುವಾಗ ಪ್ರಯಾಣಿಕ ಆಯತಪ್ಪಿ ಬಿದ್ದಿದ್ದ. ಆಗ ಸ್ಥಳದಲ್ಲೇ ಇದ್ದ ರೈಲ್ವೆ ಗಾರ್ಡ್ ಜಿತೇಂದ್ರ ಪಾಲ್ ಮತ್ತು ಆರ್‌ಪಿಎಫ್ ಕಾನ್‌ಸ್ಟೆಬಲ್ ನರಸಿಂಹ ಕನೋಜಿಯಾ ಓಡಿಬಂದು ಪ್ರಯಾಣಿಕ ರೈಲ್ವೆ ಚಕ್ರದಡಿ ಸಿಲುಕದಂತೆ ಪಕ್ಕಕ್ಕೆ ಎಳೆದು ರಕ್ಷಿಸಿದ್ದಾರೆ. ಇಬ್ಬರೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪ್ರಯಾಣಿಕನ ಪ್ರಾಣ ಉಳಿದಿದೆ.
ಇದನ್ನೂ ಓದಿ:ಎರಡೂವರೆ ದಿನಕ್ಕೆ ಮುಗಿದ ಟೆಸ್ಟ್: ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಇನ್ನಿಂಗ್ಸ್ ಮತ್ತು 63 ರನ್ಗಳ ಜಯ
Last Updated : Jun 13, 2021, 6:56 AM IST