ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ರೈಲ್ವೆ ಕಾರ್ಮಿಕನೇ ಬಲಿ..! - ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು

ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ರೈಲ್ವೆ ಕಾರ್ಮಿಕನೇ ಮೃತಪಟ್ಟಿರುವ ಘಟನೆ ಜಾರ್ಖಂಡ್​​ನ ರಾಂಚಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

railway employee died while stepping down form moving train
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ರೈಲ್ವೆ ಕಾರ್ಮಿಕನೇ ಬಲಿ

By

Published : Aug 12, 2021, 3:55 PM IST

ರಾಂಚಿ (ಜಾರ್ಖಂಡ್​): ಚಲಿಸುತ್ತಿದ್ದ ರೈಲನ್ನು ಹತ್ತಲು - ಇಳಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಎಷ್ಟೋ ಮಂದಿಯನ್ನು ರೈಲ್ವೆ ಭದ್ರತಾ ಪಡೆ (ಆರ್​ಪಿಎಫ್​) ಸಿಬ್ಬಂದಿ ಅಥವಾ ಅಲ್ಲಿದ್ದ ಜನರು ಕಾಪಾಡಿರುವ ಅನೇಕ ಘಟನೆಗಳು ನಡೆದಿವೆ. ಆದರೆ, ಪ್ರತಿಬಾರಿಯೂ ಆಪತ್ಬಾಂಧವನಂತೆ ನಮ್ಮೊಂದಿಗೆ ಯಾರೂ ಇರುವುದಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ರೈಲ್ವೆ ಕಾರ್ಮಿಕನೇ ಬಲಿ

ಜಾರ್ಖಂಡ್​​ನ ರಾಂಚಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಇನ್ನೇನು ನಿಲ್ಲುವುದರಲ್ಲಿತ್ತು. ಆದರೆ ರೈಲಿನೊಳಗಿದ್ದ ಬಾತ್​ ರೂಂಗೆ ಹೋಗಿದ್ದ ರೈಲ್ವೆ ಕಾರ್ಮಿಕರೊಬ್ಬರು ಅವಸರದಿಂದ ರೈಲು ನಿಲ್ಲುವ ಮುನ್ನವೇ ಇಳಿಯಲು ಹೋಗಿ ಪ್ರಾಣ ಕಳೆದು ಕೊಂಡಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ಸಿಲುಕಿದ ವ್ಯಕ್ತಿ - ದೇವರಂತೆ ಬಂದ ಆರ್‌ಪಿಎಫ್ ಸಿಬ್ಬಂದಿ

ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details