ರಾಯಬರೇಲಿ (ಉತ್ತರ ಪ್ರದೇಶ):ರೈಲ್ ಕೋಚ್ ಕಾರ್ಖಾನೆಯ ವೈದ್ಯ, ಅವರ ಪತ್ನಿ ಹಾಗೂ ಮಕ್ಕಳ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಾಥಮಿಕ ತನಿಖೆಯ ಆಧಾರ ಮೇಲೆ ವೈದ್ಯ ಡಾ.ಅರುಣ್ ಸಿಂಗ್ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು. ಖಿನ್ನತೆಗೆ ಒಳಗಾಗಿದ್ದ ವೈದ್ಯ ಮೊದಲು ತನ್ನ ಹೆಂಡತಿ, ನಂತರ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಬಳಿಕ ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ವೈದ್ಯರ ಮಾವ ಪೊಲೀಸ್ ಪ್ರಾಥಮಿಕ ತನಿಖೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಮೃತರ ಕುಟುಂಬದ ಸದಸ್ಯರ ಮಾತು:''ಪತಿ - ಪತ್ನಿಯ ನಡುವೆ ಸೌಹಾರ್ದಯುತ ಸಂಬಂಧವಿತ್ತು. ಅರುಣ್ ಸಿಂಗ್‌ನಲ್ಲಿ ಖಿನ್ನತೆಯಂತಹ ಯಾವುದೇ ಲಕ್ಷಣಗಳನ್ನು ಹೊಂದಿರಲಿಲ್ಲ. 2008ರಲ್ಲಿ ಇಬ್ಬರೂ ವಿವಾಹವಾಗಿದ್ದು, ಇದುವರೆಗೂ ಯಾವುದೇ ವಿವಾದಗಳು ಇಬ್ಬರ ನಡುವೆ ಕಂಡು ಬಂದಿಲ್ಲ. ಅವರ ಕರೆಗಳು ನಿಯಮಿತವಾಗಿ ಬರುತ್ತಿದ್ದವು. ಸಾಮಾನ್ಯ ಸಂಭಾಷಣೆಗಳು ನಡೆಯುತ್ತಿದ್ದವು. ಕಳೆದ ಭಾನುವಾರವಷ್ಟೇ ಕರೆ ಬಂದಿತ್ತು. ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಮಂಗಳವಾರ ತಡರಾತ್ರಿ ಅಳಿಯನ ತಾಯಿ ಕರೆ ಮಾಡಿ, ಇಬ್ಬರು ತಮ್ಮ ಫೋನ್ಗೆ ಬಂದ ಕರೆಗಳಿಗೆ ಉತ್ತರಿಸುತ್ತಿಲ್ಲ'' ಎಂದು ಮೃತ ವೈದ್ಯ ಡಾ.ಅರುಣ್ ಸಿಂಗ್ ಅವರ ಮಾವ ಜೈ ಪ್ರಕಾಶ್ ಹೇಳಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳ ಮಾಹಿತಿ: ''ಬಹುಶಃ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮತ್ತೊಂದೆಡೆ, ಮೊದಲ ನೋಟದ ಸಾಕ್ಷ್ಯದಿಂದ ವೈದ್ಯರು ಖಿನ್ನತೆಗೆ ಒಳಗಾಗಿದ್ದು, ಪತ್ನಿ ಮತ್ತು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.