ನವದೆಹಲಿ :ಪುನರ್ ಅಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳಿಂದ ಹತ್ತುವ ಪ್ರಯಾಣಿಕರಿಗೆ ಇದೀಗ ಹೆಚ್ಚಿನ ಹಣ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಜನರು ಪ್ರಯಾಣ ಮಾಡುವ ವರ್ಗ ಆಧರಿಸಿ ಇದೀಗ ರೈಲ್ವೆ ಇಲಾಖೆ ರೂ. 10ರಿಂದ 50 ರೂ.ವರೆಗೆ ಹೆಚ್ಚಿನ ಶುಲ್ಕ ವಿಧಿಸಲು ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
ಮರು ಅಭಿವೃದ್ಧಿಗೊಂಡಿರುವ ರೈಲ್ವೆ ನಿಲ್ದಾಣಗಳಿಂದ ಹತ್ತುವ ಮತ್ತು ಇಳಿದುಕೊಂಡು ದೂರದ ಪ್ರಯಾಣ ಬೆಳೆಸುವ ಜನರ ಮೇಲೆ ಇದರ ಹೊರೆ ಬೀಳಲಿದೆ. ರೈಲು ಬುಕ್ಕಿಂಗ್ ಸಮಯದಲ್ಲೇ ಈ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ನಿಲ್ದಾಣಗಳು ಕಾರ್ಯಾರಂಭ ಮಾಡಿದ ಬಳಿಕ ಶುಲ್ಕ ವಿಧಿಸುವ ಸಾಧ್ಯತೆ ಇದೆ.