- ಪಂಜಾಬ್ನ ರೈಲ್ ರೋಖೋ
- ಅಮೃತಸರದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
- ರೈಲ್ವೆ ಹಳಿಗಳ ಮೇಲೆ ಮಲಗಿ ಧರಣಿ
ದೇಶಾದ್ಯಂತ ರೈಲ್ ರೋಖೋ: ಧಾರವಾಡ, ತುಮಕೂರು, ಬೆಳಗಾವಿಯಲ್ಲಿ ರೈತರು ಪೊಲೀಸ್ ವಶಕ್ಕೆ.. LIVE UPDATES
14:23 February 18
ಅಮೃತಸರದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
14:17 February 18
ಅಂಬಾಲಾ, ಕರ್ನಾಲ್ನಲ್ಲಿ ರೈಲು ಹಳಿ ಬ್ಲಾಕ್
- ಹರಿಯಾಣದಲ್ಲಿ ಬೃಹತ್ ಪ್ರತಿಭಟನೆ
- ಅಂಬಾಲಾ, ಕರ್ನಾಲ್ನಲ್ಲಿ ರೈಲು ಹಳಿಗಳ ಮೇಲೆ ಕುಳಿತ ಅನ್ನದಾತರು
14:11 February 18
ಧಾರವಾಡದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದವರು ವಶಕ್ಕೆ
- ಧಾರವಾಡದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈಲು ತಡೆ
- ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದವರನ್ನ ತಡೆದ ಪೊಲೀಸರು
- ಪ್ರತಿಭಟನಾಕರರು ವಶಕ್ಕೆ
14:10 February 18
ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ
- ಕೊಪ್ಪಳದಲ್ಲೂ ಪ್ರತಿಭಟನೆಯ ಕೂಗು
- ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಹಾಕಿದ ಪ್ರತಿಭಟನಾಕಾರರು
- ದೆಹಲಿ ಹಿಂಸಾಚಾರಕ್ಕೂ, ಪ್ರತಿಭಟನಾನಿರತ ರೈತರಿಗೂ ಸಂಬಂಧವಿಲ್ಲ
- ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಟ್ಟು ದೇಶವನ್ನು ಸರ್ಕಾರ ಮಾರಾಟ ಮಾಡುತ್ತಿದೆ
- ರೈತರ ಮೇಲೆ ಸುಮ್ಮ ಸುಮ್ಮನೇ ಕೇಸ್ ದಾಖಲಿಸಲಾಗುತ್ತಿದೆ ಎಂದು ಆಕ್ರೋಶ
13:23 February 18
ತುಮಕೂರಲ್ಲಿ ಪ್ರತಿಭಟನಾನಿರತ ರೈತರು ಪೊಲೀಶ್ ವಶಕ್ಕೆ
- ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ರೈಲು ತಡೆ
- ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ
- ತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು
13:18 February 18
ರೈಲ್ ರೋಖೋ ಚಳವಳಿಗೆ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಸಾಥ್
- ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಿಳಿದ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ
- ರೈಲ್ ರೋಖೋ ಚಳವಳಿಗೆ ಸಾಥ್
- ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ
- ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ
13:13 February 18
- ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ ರೋಖೋ
- ಯುನೈಟೆಡ್-ಕಿಸ್ಸಾನ್ ಫ್ರಂಟ್ ನೇತೃತ್ವದಲ್ಲಿ ರೈತರ ಪ್ರತಿಭಟನೆ
- ಜಮ್ಮುವಿನ ಚನ್ನಿ ಹಿಮಾತ್ ಪ್ರದೇಶದ ರೈಲ್ವೆ ಹಳಿ ಮೇಲೆ ಜಮಾಯಿಸಿರುವ ಅನ್ನದಾತರು
13:04 February 18
ರೈಲ್ವೆ ಹಳಿಗಳನ್ನು ತಡೆದ ಹರಿಯಾಣ ರೈತರು
- ಹರಿಯಾಣದಲ್ಲಿ ಅನ್ನದಾತರ ಪ್ರತಿಭಟನೆ
- ಪಾಲ್ವಾಲ್ನಲ್ಲಿ ರೈಲ್ವೆ ಹಳಿಗಳನ್ನು ಬ್ಲಾಕ್ ಮಾಡಿದ ರೈತರು
- ಪರಿಸ್ಥಿತಿ ನಿಯಂತ್ರಿಸುತ್ತಿರುವ ಭದ್ರತಾ ಸಿಬ್ಬಂದಿ
12:54 February 18
ಕೋಲಾರದಲ್ಲಿ ರೈಲ್ ರೋಖೋ
- ಕೋಲಾರದಲ್ಲಿ ರೈಲ್ ರೋಖೋ
- ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ರೈತರು
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಧರಣಿ
- ಪೊರಕೆ ಹಿಡಿದು ನಿಂದ ಮಹಿಳಾ ಪ್ರತಿಭಟನಾಕಾರರು
12:47 February 18
ಬೆಳಗಾವಿಯಲ್ಲಿ ರೈತರು ಪೊಲೀಸ್ ವಶಕ್ಕೆ
- ಬೆಳಗಾವಿ ರೈತರ ರೈಲು ತಡೆಗೆ ಪೊಲೀಸರ ಅಡ್ಡಿ
- ಅನ್ನದಾತರನ್ನು ವಶಕ್ಕೆ ಪಡೆದ ಪೊಲೀಸರು
- ರೈತರನ್ನು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆ
- ಕೇಂದ್ರ ಸರ್ಕಾರದ ಜೊತೆ ಪೊಲೀಸರ ವಿರುದ್ಧವೂ ಘೋಷಣೆ ಕೂಗಿದ ರೈತರು
12:40 February 18
ಧಾರವಾಡದಲ್ಲಿ ಪೊಲೀಸರ ನಕಾರ
- ಕೃಷಿ ಕಾಯ್ದೆ ವಿರೋಧಿಸಿ ರೈಲ್ ರೋಖೋ
- ಧಾರವಾಡದಲ್ಲಿ ಪೊಲೀಸರ ನಕಾರ
- ರೈಲ್ವೆ ನಿಲ್ದಾಣದ ಒಳಗಡೆ ರೈತರನ್ನು ಬಿಡಲು ಪೊಲೀಸರ ವಿರೋಧ
- ಕೆಲವೊತ್ತು ಪೊಲೀಸರ ಜೊತೆ ಪ್ರತಿಭಟನಾಕಾರರ ವಾಗ್ವಾದ
- ನೀವು ರೈತರ ಪರವೋ ಅಥವಾ ಮೋದಿ ಪರವೋ ಎಂದು ಪ್ರಶ್ನೆ
- ನಾವು ಜನರ ಪರ ಆದ್ರೆ ಒಳಗಡೆ ಅವಕಾಶ ಕೊಡಲ್ಲ ಎಂದ ಪೊಲೀಸರು
12:24 February 18
ನಂಗ್ಲೋಯಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಕಣ್ಗಾವಲು
- ರೈಲು ತಡೆ ಚಳವಳಿ ಹಿನ್ನೆಲೆ
- ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿರುವ ರೈಲ್ವೆ ಭದ್ರತಾ ವಿಶೇಷ ಪಡೆ
- ದೆಹಲಿಯ ನಂಗ್ಲೋಯಿ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ
12:20 February 18
ಲೋಕತಾಂತ್ರಿಕ್ ಪಕ್ಷದಿಂದ ರೈಲು ತಡೆ
- ಬಿಹಾರದಲ್ಲಿ ಜನ್ ಅಧಿಕಾರ್ ಪಕ್ಷ (ಲೋಕತಾಂತ್ರಿಕ್) ಕಾರ್ಯಕರ್ತರಿಂದ ರೈಲು ತಡೆ
- ಪಾಟ್ನಾ ಜಂಕ್ಷನ್ನಲ್ಲಿ ಪ್ರತಿಭಟನೆ
12:06 February 18
ರೈಲು ತಡೆ ಚಳವಳಿ
ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಅನ್ನದಾತರ ಪ್ರತಿಭಟನೆ ಮುಂದುವರೆದಿದ್ದು, ಇಂದು 4 ಗಂಟೆಗಳ ಕಾಲ ರಾಷ್ಟ್ರವ್ಯಾಪಿ 'ರೈಲು ತಡೆ ಚಳವಳಿ'ಗೆ ರೈತ ಸಂಘಟನೆಗಳು ಕರೆ ನೀಡಿವೆ. ದೇಶದ ವಿವಿಧ ಪ್ರದೇಶಗಳಲ್ಲಿ ರೈತರು ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.