ಕರ್ನಾಟಕ

karnataka

ETV Bharat / bharat

Rail Roko Andolan in Punjab: ಅಮೃತಸರ, ಚಂಡೀಗಢ ಸೇರಿದಂತೆ 44 ರೈಲುಗಳ ಸಂಚಾರ ರದ್ದು - ರೈಲ್ ರೋಕೋ ಆಂದೋಲನ

ರೈತ ಸಂಘಟನೆಗಳ ಸದಸ್ಯರು ಹಮ್ಮಿಕೊಂಡಿರುವ ರೈಲ್ ರೋಕೋ ಆಂದೋಲನ 3ನೇ ದಿನಕ್ಕೆ ಕಾಲಿಟ್ಟಿದ್ದು, 44 ರೈಲುಗಳನ್ನು ರದ್ದುಗೊಳಿಸಲಾಗಿದೆ.

Rail Roko Andolan in Punjab
ರೈಲ್ ರೋಕೋ ಆಂದೋಲನ

By ETV Bharat Karnataka Team

Published : Sep 30, 2023, 11:37 AM IST

ಚಂಡೀಗಢ: ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ, ಇತ್ತೀಚಿನ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ಮತ್ತು ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರದಿಂದ ಮೂರು ದಿನಗಳ ಕಾಲ ಪಂಜಾಬ್‌ನ ವಿವಿಧ ರೈತ ಸಂಘಟನೆಗಳ ಸದಸ್ಯರು ಹಮ್ಮಿಕೊಂಡಿರುವ 'ರೈಲ್ ರೋಕೋ' ಚಳವಳಿ ಕೊನೆಯ ದಿನಕ್ಕೆ ಕಾಲಿಟ್ಟಿದೆ.

ಕೊನೆಯ ದಿನವಾದ ಇಂದು ಅಮೃತಸರ, ಜಲಂಧರ್ ಕಂಟೋನ್ಮೆಂಟ್ ಮತ್ತು ತರಣ್ ಸೇರಿದಂತೆ 12 ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಂದೋಲನದಿಂದಾಗಿ ರೈಲ್ವೆ ಇಲಾಖೆ ಹಾಗೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ರದ್ದಾದ ರೈಲುಗಳು, ಬದಲಾದ ಮಾರ್ಗಗಳು:ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ರೈತರು ಹಳಿಗಳ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದಾಗಿ ರೈಲ್ವೆ ಇಲಾಖೆ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಈಗಾಗಲೇ ಸಿದ್ಧಪಡಿಸಿದ ಮಾರ್ಗಸೂಚಿ ಪ್ರಕಾರ ಹಲವು ಮಾರ್ಗಗಳನ್ನು ಬದಲಾಯಿಸಿದೆ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹರಿಯಾಣ, ಪಂಜಾಬ್ ಮತ್ತು ದೆಹಲಿ ನಡುವೆ ಓಡುವ ಹಲವು ರೈಲುಗಳ ಮೇಲೆ ಸಹ ಪ್ರತಿಭಟನೆ ಪರಿಣಾಮ ಬೀರಿದೆ.

ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 44 ರೈಲುಗಳನ್ನು ರದ್ದುಗೊಳಿಸಲಾಗಿದೆ. 20 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, 20ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಇದರಿಂದಾಗಿ ಪಂಜಾಬ್ ಮಾತ್ರವಲ್ಲದೆ ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು ಪಂಜಾಬ್‌ನಲ್ಲಿ ಮುಖ್ಯವಾಗಿ ಮೋಗಾ ಜಿಲ್ಲೆ, ಹೋಶಿಯಾರ್‌ಪುರ, ಗುರುದಾಸ್‌ಪುರದ ಬಟಾಲಾ, ಜಲಂಧರ್ ಕಂಟೋನ್ಮೆಂಟ್, ಸುನಮ್, ನಭಾ, ಬಸ್ತಿಯಲ್ಲಿ ಟ್ರ್ಯಾಕ್‌ಗಳನ್ನು ನಿರ್ಬಂಧಿಸಲು ರೈತರು ಬೇರೆ ರಾಜ್ಯಗಳಿಂದ ಆಗಮಿಸಿದ್ದಾರೆ. ಫಿರೋಜ್‌ಪುರದ ಟ್ಯಾಂಕ್‌ವಾಲಿ ಮತ್ತು ಮಲ್ಲನ್‌ವಾಲಾ, ಬಟಿಂಡಾದ ರಾಂಪುರ ಮತ್ತು ಅಮೃತಸರದ ದೇವಿದಾಸ್‌ಪುರದಲ್ಲಿ ರೈಲು ಹಳಿಗಳ ಮೇಲೆ ಕುಳಿತು ಆಕ್ರೋಶ ಹೊರ ಹಾಕುತ್ತಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು : ರೈಲು ನಿಲುಗಡೆ ಚಳವಳಿಯ (Farmers Rail Roko Movement) ಪ್ರಮುಖ ಬೇಡಿಕೆಗಳೆಂದರೆ ಪ್ರವಾಹ ಸಂತ್ರಸ್ತರಿಗೆ 5 ಸೂಕ್ತ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ದೆಹಲಿಯಲ್ಲಿ ಮಾರ್ಚ್ ವೇಳೆ ಅಂಗೀಕರಿಸಿದ ಎಂಎಸ್‌ಪಿ ಖಾತರಿ ಕಾನೂನನ್ನು ಈಡೇರಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಇತ್ತೀಚೆಗೆ ನಿಧನರಾದ ಹಸಿರುಕ್ರಾಂತಿಯ ಹರಿಕಾರ ಎಂಎಸ್​ ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು, ರೈತರು-ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, MNREGA ಅಡಿಯಲ್ಲಿ ವರ್ಷಕ್ಕೆ 200 ದಿನ ಉದ್ಯೋಗ ನೀಡಬೇಕು, ಪಂಜಾಬ್ ಸೇರಿದಂತೆ ಉತ್ತರ ಭಾರತದಲ್ಲಿ ಸ್ಮ್ಯಾಕ್, ಹೆರಾಯಿನ್ ನಂತಹ ಮಾರಕ ಡ್ರಗ್ಸ್ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ದೆಹಲಿಯಲ್ಲಿ ಖಲಿಸ್ತಾನ್​ ಪರ ಬರಹಗಳು ಪತ್ತೆ... ಪಂಜಾಬ್​ನಲ್ಲಿ ರೈತರ ರೈಲ್​ ರೋಕೋ ಚಳವಳಿಯಲ್ಲಿ ಖಲಿಸ್ತಾನಿ ಬೆಂಬಲಿಗರು ಭಾಗಿ ಶಂಕೆ

ABOUT THE AUTHOR

...view details