ಹೈದರಾಬಾದ್(ತೆಲಂಗಾಣ):ಟಾಲಿವುಡ್ ಸೆಲೆಬ್ರಿಟಿಗಳು ಹೆಚ್ಚಿರುವ ಹೈದರಾಬಾದ್ನ ಬಂಜಾರಾ ಹಿಲ್ಸ್ನ ಪಬ್ ಮೇಲೆ ದಾಳಿ ನಡೆಸಿರುವ ಪೊಲೀಸರು, ಪಬ್ ಮಾಲೀಕ ಸೇರಿ 130 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ತೆಲುಗು ಬಿಗ್‌ಬಾಸ್ ವಿಜೇತ ಹಾಗೂ ಟಾಲಿವುಡ್ನ ಜನಪ್ರಿಯ ಗಾಯಕ ರಾಹುಲ್ ಸಿಪ್ಲಿಗಂಜ್ ಕೂಡಾ ಇದ್ದಾರೆಂದು ತಿಳಿದುಬಂದಿದೆ. ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ದಾಳಿ ನಡೆಸಲಾಗಿದ್ದು, ಸಮಯ ಮೀರಿ ಪಬ್ ತೆರೆದಿದ್ದಕ್ಕಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
ಹೈದರಾಬಾದ್ ಪಬ್ ಮೇಲೆ ಪೊಲೀಸ್ ದಾಳಿ: ತೆಲುಗು ಬಿಗ್‌ಬಾಸ್ ವಿಜೇತ ಸೇರಿ ಹಲವರು ವಶಕ್ಕೆ - ಟಾಲಿವುಡ್ನ ಜನಪ್ರಿಯ ಗಾಯಕ ರಾಹುಲ್ ಸಿಪ್ಲಿಗಂಜ್
ಹೈದರಾಬಾದ್ನ ಪ್ರತಿಷ್ಟಿತ ಬಂಜಾರಾ ಹಿಲ್ಸ್ ಪ್ರದೇಶದ ಪಬ್ ಮೇಲೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರ ಟಾಸ್ಕ್ ಫೋರ್ಸ್ ತೆಲುಗು ಬಿಗ್ ಬಾಸ್ ವಿಜೇತ ಸೇರಿದಂತೆ ಸುಮಾರು 130 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
![ಹೈದರಾಬಾದ್ ಪಬ್ ಮೇಲೆ ಪೊಲೀಸ್ ದಾಳಿ: ತೆಲುಗು ಬಿಗ್‌ಬಾಸ್ ವಿಜೇತ ಸೇರಿ ಹಲವರು ವಶಕ್ಕೆ Raids on Pudding and Mink Pub in Hyderabad, signer other celebrities detained](https://etvbharatimages.akamaized.net/etvbharat/prod-images/768-512-14914504-thumbnail-3x2-raaaa.jpg)
ಹೈದರಾಬಾದ್ ಪಬ್ ಮೇಲೆ ಪೊಲೀಸರ ದಾಳಿ: ನಟರು ಮತ್ತು ಗಾಯಕರು ವಶಕ್ಕೆ
ಪಬ್‌ನಲ್ಲಿ ಕೊಕೇನ್, ಗಾಂಜಾ ಮತ್ತು ಐಎಸ್‌ಡಿಯನ್ನು ಪತ್ತೆ ಮಾಡಲಾಗಿದೆ. ವಶಕ್ಕೆ ಪಡೆದಿರುವ 130 ಮಂದಿಯಲ್ಲಿ 33 ಯುವತಿಯರು ಮತ್ತು 95 ಯುವಕರು ಸೇರಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ 3 ಗಂಟೆಗೆ ಪಬ್ ಮೇಲೆ ದಾಳಿ ನಡೆಸಿದ್ದು, ವಶಕ್ಕೆ ಪಡೆದವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಈ ವೇಳೆ ಕೆಲವು ಯುವಕರು ಪೊಲೀಸ್ ಠಾಣೆಯ ಆವರಣದಲ್ಲಿಯೇ ಗಲಾಟೆ ನಡೆಸಿದ್ದು, ಏಕೆ ವಶಕ್ಕೆ ಪಡೆದಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಧ್ವನಿವರ್ಧಕ ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಕ್ತೇವೆ: ರಾಜ್ ಠಾಕ್ರೆ