ಖನೌಜ್:ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಮನೆಯ ಮೇಲಿನ ದಾಳಿ ಮಂಗಳವಾರವೂ ಮುಂದುವರಿದಿದ್ದು, ಮನೆಯಲ್ಲಿ ಸಿಕ್ಕ ಹಣದ ಕಂತೆಗಳ ಎಣಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಯನ್ನು ಕರೆಸಲಾಗಿದೆ. ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯದ ಅಧಿಕಾರಿಗಳ ಸಮ್ಮುಖದಲ್ಲೇ ಈ ಎಣಿಕೆ ಕಾರ್ಯ ನಡೆಯುತ್ತಿದೆ.
ಜಿಎಸ್ಟಿ ವಂಚನೆ ಆರೋಪದಡಿ ಈ ದಾಳಿ ನಡೆದಿದೆ. ಅಲ್ಲದೇ, ದಾಳಿಯಲ್ಲಿ 177 ಕೋಟಿ ರೂಪಾಯಿ ನಗದು, 23 ಕೆ.ಜಿ. ಬಂಗಾರ ಮತ್ತು 600 ಕೆ.ಜಿ. ಸುಗಂಧ ದ್ರವ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.