ನವದೆಹಲಿ: ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ.
ರಾಹುಲ್ ಗಾಂಧಿ ಇಟಲಿ ಪ್ರವಾಸ: ಬಿಜೆಪಿಗರು ವದಂತಿ ಹರಡಬಾರದು-ಸುರ್ಜೇವಾಲಾ - Congress leader Rahul Gandhi abroad visit
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಹುಲ್ ಗಾಂಧಿ
ರಾಹುಲ್ ಇಟಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, "ರಾಹುಲ್ ಗಾಂಧಿ ಅವರು ಸಣ್ಣದೊಂದು ವೈಯಕ್ತಿಕ ಪ್ರವಾಸದಲ್ಲಿದ್ದು, ಶೀಘ್ರದಲ್ಲೇ ಮರಳಲಿದ್ದಾರೆ. ಬಿಜೆಪಿ ಮತ್ತು ಮಾಧ್ಯಮ ಸ್ನೇಹಿತರು ಅನಗತ್ಯ ವದಂತಿಗಳನ್ನು ಹರಡಬಾರದು" ಎಂದಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ಜನವರಿ ಮಧ್ಯದ ವೇಳೆಗೆ ಘೋಷಣೆಯಾಗುವ ನಿರೀಕ್ಷೆಯಿದೆ. ಜನವರಿ 3ರಂದು ರಾಹುಲ್ ಪಂಜಾಬ್‌ನ ಮೋಗಾದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ.